ಸ್ಯಾಂಡಲ್ ವುಡ್ (Sandalwood) ನಟ, ನಿರ್ಮಾಪಕ ಟಿ.ಚಂದ್ರಶೇಖರ್ (T. Chandrasekhar) ಸ್ವತಃ ತನ್ನ ಹೆಂಡತಿಯ ವಿರುದ್ಧವೇ ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಪ್ರದೇಶದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದು ಮೇಲ್ನೋಟಕ್ಕೆ ಕೌಟುಂಬಿಕ ಸಮಸ್ಯೆ ಅನಿಸಿದರೂ, ಹೆಂಡತಿಯ (Wife) ವಿರುದ್ಧ ಚಂದ್ರಶೇಖರ್ ಗುರುತರ ಆರೋಪ ಮಾಡಿದ್ದಾರೆ. ಇವರು ‘ಹೀಗೊಂದು ದಿನ’ ಹಾಗು ‘ಅಪ್ಪುಗೆ’ ಎಂಬ ಎರಡು ಚಿತ್ರಗಳ ನಿರ್ಮಾಪಕರು.
Advertisement
ಪತ್ನಿ ಡ್ರಗ್ (Drugs) ವ್ಯಸನಿಯಾಗಿದ್ದು, ಡ್ರಗ್ಸ್ ಗಾಗಿಯೇ ಆಕೆ ಡ್ರಗ್ ಪೆಡ್ಲರ್ (Peddler) ಜೊತೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸ್ ಠಾಣೆಗೆ ಕೊಟ್ಟ ದೂರಿನಲ್ಲಿ ‘ನನ್ನ ಹೆಂಡತಿಯಾದ ನಮಿತಾರನ್ನು ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದೇನೆ. ನನ್ನ ಹೆಂಡತಿಯೊಂದಿಗೆ ವಾಸವಾಗಿರುತ್ತೇನೆ. ನಮಗೆ ಮಕ್ಕಳು ಇರುವುದಿಲ್ಲ. ನನ್ನ ಹೆಂಡತಿ ಡ್ರಗ್ಸ್ ಹಾಗೂ ಮಾದಕ ವಸ್ತುಗಳ ವ್ಯಸನಿಯಾಗಿರುತ್ತಾಳೆ. ಅದನ್ನು ಬಿಡಿಸಲು ಬಹಳ ಸಾರಿ ಪ್ರಯತ್ನ ಪಟ್ಟಿರುತ್ತೇನೆ. ಆದರೂ ಕದ್ದು ಮುಚ್ಚಿ ಆಕೆ ಸೇವನೆ ಮಾಡುತ್ತಿರುತ್ತಾಳೆ’ ಎಂದು ಬರೆದಿದ್ದಾರೆ.
Advertisement
Advertisement
ಮುಂದುವರೆದು, ‘ಇತ್ತೀಚೆಗೆ ಜನವರಿಯಿಂದ ಲಕ್ಷ್ಮೀ ಶ್ ಪ್ರಭು (Lakshmish Prabhu) ಎಂಬ ಡ್ರಗ್ ಪೆಡ್ಲರ್ ನೊಂದಿಗೆ ಸ್ನೇಹೆ ಬೆಳೆಸಿಕೊಂಡು ಅಕ್ರಮ ಸಂಬಂಧ ಇಟ್ಟುಕೊಂಡಿರುತ್ತಾಳೆ. ಅದಕ್ಕೆ ಸಂಬಂಧಪಟ್ಟಂತೆ ಸಾಕ್ಷಿಗಳು ನನಗೆ ಸಿಕಿದ್ದು, ನಾನು ನನ್ನ ಹೆಂಡತಿಗೆ ಬುದ್ದಿ ಹೇಳಿರುತ್ತೇನೆ. ಆದರೂ ನನ್ನ ಮಾತನ್ನು ಆಕೆ ತಿರಸ್ಕಾರ ಮಾಡಿ, ಅವನೊಂದಿಗೆ ಕದ್ದು ಮುಚ್ಚಿ ಸಂಬಂಧವಟ್ಟು ಇಟ್ಟುಕೊಂಡಿರುತ್ತಾಳೆ. ಅವನು ಮಾದಕ ವಸ್ತಗಳನ್ನು ಕೊಡುತ್ತಿರುತ್ತಾನೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಹೃದಯ ಕಿತ್ತು ಎದೆಗೆ ಹಚ್ಚಿಕೊಂಡು ಪಾರ್ಟಿಗೆ ಬಂದ ಉರ್ಫಿ ಜಾವೇದ್
Advertisement
ಹೆಂಡತಿ ಮತ್ತು ಅವಳ ಪ್ರಿಯಕರ ತಮ್ಮ ಮೇಲೆ ಹಲ್ಲೆ ಮಾಡಿದ್ದನ್ನೂ ದೂರಿನಲ್ಲಿ ಉಲ್ಲೇಖಿಸಿರುವ ಚಂದ್ರಶೇಖರ್, ‘ಜೂನ್ 16, 12.30 ಗಂಟೆಯಲ್ಲಿ ನಾನು ಇಲ್ಲದ ಸಮಯದಲ್ಲಿ ಲಕ್ಷ್ಮೀಶ್ ಪ್ರಭುವನ್ನು ಮನೆಗೆ ಕರೆಯಿಸಿಕೊಂಡು ಅವನೊಂದಿಗೆ ದೈಹಿಕ ಸಂಪರ್ಕದಲ್ಲಿದ್ದಾಗ ನಾನು ಪ್ರತ್ಯಕ್ಷವಾಗಿ ನೋಡಿ ನನ್ನ ಹೆಂಡತಿಯನ್ನು ಕೇಳಿದಾಗ ನನ್ನ ಹೆಂಡತಿ ಹಾಗೂ ಅವಳ ಪ್ರಿಯಕರ ನನ್ನ ಕೈ ಕಾಲು ಹಿಡಿದುಕೊಂಡು ರಕ್ತ ಬರುವಂತೆ ಹೊಡೆದಿರುತ್ತಾರೆ. ನನ್ನ ಹೆಂಡತಿ ನನ್ನನ್ನು ಹಿಡಿದುಕೊಂಡು ಅವಳ ಪ್ರಿಯಕರ ನನ್ನ ಮೇಲೆ ಚಾಕುವಿನಿಂದ ಹಲ್ಲೇ ಮಾಡಿರುತ್ತಾರೆ’ ಎಂದು ದೂರಿನಲ್ಲಿ ಚಂದ್ರಶೇಖರ್ ಉಲ್ಲೇಖಿಸಿದ್ದಾರೆ.
ಇತ್ತ ಪತಿಯ ಮೇಲೆ ಮರು ದೂರು ನೀಡಿರುವ ಪತ್ನಿ, ಮನೆಯಲ್ಲಿ ಡ್ರಗ್ ಇಟ್ಟು ಅರೆಸ್ಟ್ ಮಾಡಿಸ್ತಿನಿ ಎಂದು ಚಂದ್ರಶೇಖರ್ ಬೆದರಿಕೆ ಹಾಕಿದ್ದಾರಂತೆ. ಅಷ್ಟಲ್ಲದೆ ದೂರುದಾರೆಯ ಸ್ನೇಹಿತ ಲಕ್ಷ್ಮೀಶ್ ಪ್ರಭುಗೆ ಥಳಿಸಿದ್ದಲ್ಲದೆ ಚಾಕುವಿನಿಂದ ತನ್ನ ಮೇಲೆ ಕೂಡ ಹಲ್ಲೆ ನಡೆಸಿರೋದಾಗಿ ಪತ್ನಿ ದೂರು ನೀಡಿದ್ದಾರೆ. ಸದ್ಯ ಈ ಸಂಬಂಧ ಪರಸ್ಪರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ರು ತನಿಖೆ ನಡೆಸುತ್ತಿದ್ದಾರೆ.