ರಾಯಚೂರು: ತಾಲೂಕಿನ ಏಗನೂರು ಗ್ರಾಮದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿ ಹಾಗೂ ಪತ್ನಿ ಸಹೋದರಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನ ರಾಯಚೂರು ಗ್ರಾಮೀಣ ಠಾಣೆ ಪೊಲೀಸರು (Raichur Rural Police) ಬಂಧಿಸಿದ್ದಾರೆ.
ತವರು ಮನೆಯಲ್ಲಿದ್ದ ಪತ್ನಿ ಪದ್ಮ ಹಾಗೂ ಪತ್ನಿ ಸಹೋದರಿ ಬೂದೇವಿ ಮೇಲೆ ಹಲ್ಲೆ ಮಚ್ಚಿನಿಂದ ಹಲ್ಲೆ ಮಾಡಿ ಆರೋಪಿ ತಿಮ್ಮಪ್ಪ ಪರಾರಿಯಾಗಿದ್ದ. ಮೊದಲನೇ ಪತ್ನಿ ಪದ್ಮಾಗೆ ನಾಲ್ಕು ಮಕ್ಕಳಿದ್ದು ವಿಚ್ಛೇದನ ಕೊಡದೇ ತಿಮ್ಮಪ್ಪ 2ನೇ ಮದುವೆಯಾಗಿದ್ದ. ಹೀಗಾಗಿ ಜೀವನಾಂಶ ಕೋರಿ ಪತ್ನಿ ನ್ಯಾಯಾಲಯ (Court) ಮೆಟ್ಟಿಲೇರಿದ್ದಳು. ಅಲ್ಲದೇ ಪತ್ನಿಗೆ ತಿಳಿಯದಂತೆ ತಿಮ್ಮಪ್ಪ ಜಮೀನು ಮಾರಾಟ ಮಾಡಿದ್ದ. ಜಮೀನು ವಿಚಾರಕ್ಕೆ ಪತ್ನಿ ಪದ್ಮ ತಕರಾರು ಹಾಕಿದ್ದಳು. ಇದೇ ವಿಚಾರಕ್ಕೆ ಜಗಳ ತೆಗೆದು ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ.
ಅಕ್ಕನ ಮೇಲಿನ ಹಲ್ಲೆ ತಡೆಯಲು ಹೋದ ತಂಗಿ ಬೂದೇವಿ ಮೇಲೆಯೂ ಹಲ್ಲೆಯಾಗಿದೆ. ಮದುವೆ ನಿಶ್ಚಿತಾರ್ಥವಾಗಿ ಇನ್ನೊಂದು ತಿಂಗಳಲ್ಲಿ ಬೂದೇವಿ ಮದುವೆ ನಿಶ್ಚಯವಾಗಿತ್ತು. ಮದುವೆ ಕಾರ್ಡ್ ಕೊಡಲು ಬಂದಿದ್ದ ಬೂದೇವಿ ಅಕ್ಕನನ್ನ ಕಾಪಾಡಲು ಹೋಗಿ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದಾಳೆ. ಇದನ್ನೂ ಓದಿ: ಉಚ್ಛಾಟನೆ ಬಳಿಕ ವಿಜಯಪುರಕ್ಕೆ ಯತ್ನಾಳ್ ಆಗಮನ – ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ; ಹೋಮ, ಹವನ
ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಮಿಡಿದೊಡ್ಡಿ ಗ್ರಾಮದ ಆರೋಪಿ ತಿಮ್ಮಪ್ಪನನ್ನ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಅಮಾಯಕರ ಜೀವ ಬಲಿ ಪಡೆಯುತ್ತಲೇ ಇದೆ ಬಿಬಿಎಂಪಿ ಕಸದ ಲಾರಿ – 4 ವರ್ಷಗಳಲ್ಲಿ ಸಾಲು ಸಾಲು ಅಪಘಾತ