ಪಾಟ್ನಾ: ನನ್ನ ಗಂಡ ಗಬ್ಬು ವಾಸನೆ ಬರುತ್ತಾನೆ. ಹೀಗಾಗಿ ನನಗೆ ಆತನಿಂದ ವಿಚ್ಛೇದನ ಕೊಡಿಸಿ ಎಂದು ಪತ್ನಿಯೊಬ್ಬಳು ರಾಜ್ಯ ಮಹಿಳಾ ಆಯೋಗದ ಮೊರೆ ಹೋಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಮಹಿಳೆಯನ್ನು ಸೋನಿ ದೇವಿ(20) ಎಂದು ಗುರುತಿಸಲಾಗಿದ್ದು, ಈಕೆ ವೈಶಾಲಿ ಜಿಲ್ಲೆಯ ನಯಗೌನ ಗ್ರಾಮದ ದೆಸ್ರಿ ಬ್ಲಾಕ್ ನಿವಾಸಿಯಾಗಿದ್ದಾರೆ. ಸದ್ಯ ಈಕೆ ತನ್ನ ಪತಿ ಮನೀಶ್(23) ನಿಂದ ವಿಚ್ಚೇದನಕ್ಕಾಗಿ ಕಾಯುತ್ತಿದ್ದಾರೆ. ನನ್ನ ಪತಿ ವಿಪರೀತ ವಾಸನೆ ಬರುತ್ತಾನೆ. ನನಗೆ ಅವನೊಂದಿಗೆ ಜೀವನ ನಡೆಸಲು ಕಷ್ಟವಾಗುತ್ತಿದೆ. ಹೀಗಾಗಿ ದಯವಿಟ್ಟು ಆತನಿಂದ ನನಗೆ ಡಿವೋರ್ಸ್ ಕೊಡಿಸಿ. ಈ ಮೂಲಕ ನನಗೆ ಆತನಿಂದ ಮುಕ್ತಿ ನೀಡಿ ಎಂದು ಬೇಡಿಕೊಂಡಿದ್ದಾಳೆ.
Advertisement
Advertisement
ವಾಸನೆ ಬರುತ್ತಿರೋದು ಯಾಕೆ?
ಮನೀಶ್ ಪ್ರತಿ ದಿನ ಸ್ನಾನ ಹಾಗೂ ಶೇವ್ ಮಾಡಲ್ಲ. ಇಷ್ಟು ಮಾತ್ರವಲ್ಲದೆ ಆತ ದಿನನಿತ್ಯ ಹಲ್ಲು ಉಜ್ಜಲ್ಲ. ಹೀಗೆ ದಿನನಿತ್ಯದ ಸಣ್ಣ-ಸಣ್ಣ ಕೆಲಸವನ್ನೂ ಮಾಡಲ್ಲ. ಹೀಗಾಗಿ ಆತ ಗಬ್ಬುನಾತ ಬೀರುತ್ತಿರುತ್ತಾನೆ ಎಂದು ಸೋನಿ ತನ್ನ ಮನೀಶ್ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
Advertisement
ಸೋನಿ ದೇವಿ ಗುರುವಾರ ಮಹಿಳಾ ಆಯೋಗದಲ್ಲಿ ತನ್ನ ಪತಿ ಶುಚಿತ್ವ ಕಾಪಾಡುತ್ತಿಲ್ಲ. ಹೀಗಾಗಿ ನನಗೆ ವಿಚ್ಛೇದನ ಕೊಡಿಸಿ ಆತನಿಂದ ಮುಕ್ತಿ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಆಯೋಗದ ಸದಸ್ಯೆ ಪ್ರತಿಮಾ ಸಿನ್ಹಾ, ಕೇವಲ ಡಿವೋರ್ಸಿಗಾಗಿ ಇಂತಹ ಸಾಮಾನ್ಯ ಕಾರಣಗಳನ್ನು ನೀಡಬೇಡ ಎಂದು ಬುದ್ಧಿ ಹೇಳಿ ಕಳುಹಿಸಿದ್ದಾರೆ. ಅಲ್ಲದೆ ಇತ್ತ ಪತಿಗೆ ಶುಚಿತ್ವ ಕಾಪಾಡಿಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ ಎಂಬುದಾಗಿ ವರದಿಯಾಗಿದೆ.
Advertisement
ಸೋನಿ ಮಹಿಳಾ ಆಯೋಗಕ್ಕೆ ನೀಡಿದ ದೂರಿನಲ್ಲಿ, ಪ್ಲಂಬರ್ ಆಗಿರುವ ನನ್ನ ಪತಿ ಕೆಲವೊಮ್ಮೆ 10 ದಿನವಾದರೂ ಸ್ನಾನ ಮಾಡಲ್ಲ. ಅಲ್ಲದೆ ಆತ ದಿನ ನಿತ್ಯ ಹಲ್ಲು ಉಜ್ಜಲ್ಲ. ನಮಗೆ ಮಕ್ಕಳಾಗಿಲ್ಲ. ನಮ್ಮಿಬ್ಬರ ಸಂಬಂಧ ಚೆನ್ನಾಗಿಲ್ಲ. ಜೀವನಕ್ಕೆ ಅರ್ಥವಿಲ್ಲ. ಜೀವನ ನಿಷ್ಪ್ರೋಜಕ ಎಂದು ಬರೆದಿದ್ದಾರೆ. ಅಲ್ಲದೆ ವಿಚ್ಚೇದನದ ಜೊತೆಗೆ ಮದುವೆ ಸಮಯದಲ್ಲಿ ನನಗೆ ನನ್ನ ತವರು ಮನೆಯಿಂದ ನೀಡಿದ್ದ ಚಿನ್ನ ಹಾಗೂ ಇತರ ಬೆಲೆಬಾಳುವ ಸ್ತುಗಳನ್ನು ಕೂಡ ಹಿಂದಿರುಗಿಸುವಂತೆ ಕೋರಿಕೊಂಡಿದ್ದಾರೆ.
ಇತ್ತ ಆಯೋಗದ ಸದಸ್ಯೆ ಪ್ರತಿಮಾ, ದಂಪತಿಯನ್ನು ಒಂದು ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ತಪ್ಪನ್ನು ತಿದ್ದಿಕೊಳ್ಳಲು ಸೋನಿ ಪತಿಗೆ 2 ತಿಂಗಳ ಕಾಲಾವಕಾಶ ನೀಡಿದ್ದಾರೆ. ಒಂದು ವೇಳೆ ಆತ ಈ 2 ತಿಂಗಳಲ್ಲಿ ಸರಿ ಹೋಗದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಸೋನಿ ಪತಿ ಮನೀಶ್ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ ಪತ್ನಿಯ ಮನಸ್ಸನ್ನು ಮತ್ತೆ ಗೆಲ್ಲುವಲ್ಲಿ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾನೆ.