DistrictsKarnatakaLatestMysuru

ಟಿಕ್‍ಟಾಕ್ ಮೂಲಕ ಹಂಗಿಸ್ತಿದ್ದ ಪತ್ನಿಗೆ ಚಾಕುವಿನಿಂದ ಇರಿದ ಪತಿ

– ಪತಿ, ಮಕ್ಕಳನ್ನ ಬಿಟ್ಟು ಬೇರೊಬ್ಬನ ಜೊತೆ ವಾಸ

ಮೈಸೂರು: ಟಿಕ್‍ಟಾಕ್ ಮಾಡಿ ನಿರಂತರವಾಗಿ ಹಂಗಿಸುತ್ತಿದ್ದ ಪತ್ನಿಗೆ ಪತಿ ಚಾಕುವಿನಿಂದ ಇರಿದ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಾನಸಾ ವಿದ್ಯಾಸಂಸ್ಥೆಯ ಬಳಿ ನಡೆದಿದೆ.

ಪತ್ನಿ ಸವಿತಾ ಚಾಕು ಇರಿತದಿಂದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾಳೆ. ಪತ್ನಿಗೆ ಚಾಕು ಇರಿದ ಪತಿ ಶ್ರೀನಿವಾಸ್ ಪೊಲೀಸರಿಗೆ ಶರಣಾಗಿದ್ದಾನೆ. ಶ್ರೀನಿವಾಸ್ ಮತ್ತು ಸವಿತಾ 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಒಟ್ಟಾಗಿ ಸಂಸಾರ ನಡೆಸುತ್ತಿದ್ದರು. ಆಗಾಗ ಸವಿತಾ ಮತ್ತು ಶ್ರೀನಿವಾಸ್ ಮಧ್ಯೆ ಜಗಳ ನಡೆಯುತ್ತಿತ್ತು. ಹೀಗಾಗಿ ಸವಿತಾ ಪತಿ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಬೇರೊಬ್ಬ ವ್ಯಕ್ತಿಯೊಂದಿಗೆ ಜೀವನ ಸಾಗಿಸುತ್ತಿದ್ದಳು.

ಸವಿತಾ ಪ್ರತಿದಿನ ಟಿಕ್‍ಟಾಕ್ ಮಾಡುವ ಮೂಲಕ ಪತಿ ಶ್ರೀನಿವಾಸ್‍ನನ್ನು ಹಂಗಿಸುತ್ತಿದ್ದಳು. ಇದರಿಂದ ಪತಿ ತುಂಬಾ ಕೋಪಗೊಂಡಿದ್ದನು. ಶುಕ್ರವಾರ ಮಕ್ಕಳ ಹುಟ್ಟುಹಬ್ಬಕ್ಕೆಂದು ಸವಿತಾ ಪತಿಯ ಮನೆಗೆ ಬಂದಿದ್ದಳು. ಈ ವೇಳೆ ಶ್ರೀನಿವಾಸ್ ಚಾಕುವಿನಿಂದ ಸವಿತಾಗೆ ಇರಿದಿದ್ದಾನೆ. ನಂತರ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಇತ್ತ ಚಾಕು ಇರಿತದಿಂದ ಗಾಯಗೊಂಡ ಪತ್ನಿ ಸವಿತಾಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶ್ರೀನಿವಾಸ್‍ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Reply

Your email address will not be published.

Back to top button