ಬೆಂಗಳೂರು: ಹಳೇ ಪ್ರಿಯತಮೆಯೊಂದಿಗೆ ಅಕ್ರಮ ಸಂಬಂಧವೇ ತನ್ನ ಪತ್ನಿ (Wife) ಆತ್ಮತ್ಯೆಗೆ ಕಾರಣ ಎಂದು ಟೆಕ್ಕಿ (Techie) ಬಶೀರ್ ಉಲ್ಲಾ ಕೊನೆಗೂ ಪೊಲೀಸರ ಎದುರು ಸತ್ಯ ಒಪ್ಪಿಕೊಂಡಿದ್ದಾರೆ.
ಹೌದು. ಇತ್ತೀಚೆಗಷ್ಟೇ ತನ್ನ ಪತಿ ಅಕ್ರಮ ಸಂಬಂಧ ಹೊಂದಿರುವುದಾಗಿ ಆರೋಪಿಸಿ ಗೃಹಿಣಿ ಬಾಹರ್ ಅಸ್ಮಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಹಿಳೆಯ ಪೋಷಕರು ಟೆಕ್ಕಿ ಪತಿ ಬಶೀರ್ ಉಲ್ಲಾ ಮಗಳನ್ನ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾನೆಂದು ಆರೋಪಿಸಿದ್ದರು. ಇದನ್ನೂ ಓದಿ: ಪತಿ ವಿರುದ್ಧ ಅಕ್ರಮ ಸಂಬಂಧ ಆರೋಪ – ಪತ್ನಿ ನೇಣಿಗೆ ಶರಣು
ಪೊಲೀಸರು, ಟೆಕ್ಕಿ ಬಶೀರ್ ಉಲ್ಲಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡು ಬಂಧನ ಮಾಡಿ ತನಿಖೆಗೆ ಒಳಪಡಿಸಿದ್ದರು. ಅಸ್ಮಾ ಸೂಸೈಡ್‌ಗೆ ಪ್ರೇರಣೆ ನೀಡಿದ್ದ ಆರೋಪದ ಮೇಲೆ ಆರೋಪಿ ಟೆಕ್ಕಿ ಬಶೀರ್ ಉಲ್ಲಾನನ್ನ ವಿಚಾರಣೆ ಮಾಡಿದಾಗ ಮಾಜಿ ಪ್ರಿಯತಮೆಯೊಂದಿಗೆ ಅಕ್ರಮ ಸಂಬಂಧ ಇದ್ದ ಬಗ್ಗೆ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಖಳನಟ ಶೇಷಗಿರಿ ಬಸವರಾಜು ವಿರುದ್ಧ ರೇಪ್ ಆರೋಪ ಪ್ರಕರಣ; ಬಿ-ರಿಪೋರ್ಟ್ ಸಲ್ಲಿಕೆ
ನನಗೆ ಅಕ್ರಮ ಸಂಬಂಧ ಇತ್ತು. ಅದನ್ನು ಅವಳಿಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಹಾಗಾಗಿ ನಿತ್ಯ ನನ್ನ ಜೊತೆ ಗಲಾಟೆಗೆ ಮುಂದಾಗುತ್ತಾ ಇದ್ದಳು. ಆಕೆಯ ಗಲಾಟೆಗೆ ನಾನು ಕೇರ್ ಮಾಡದೇ ಇದ್ದುದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿ ಟೆಕ್ಕಿ ಬಶೀರ್ ಉಲ್ಲಾ ಪೊಲೀಸರ ಮುಂದೆ ತಪ್ಪೋಪ್ಪಿಕೊಂಡಿದ್ದಾನೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಮದ್ಯ ಖರೀದಿಗೆ ಹಣ ಕೊಡಲಿಲ್ಲ ಅಂತ ತಂದೆಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಮಗ
ಆರೋಪಿ ಬಶೀರ್ ಗೆ ಕಾಲೇಜು ದಿನಗಳಲ್ಲಿದ್ದ ಪ್ರಿಯತಮೆಗೆ ಮದುವೆ ಆಗಿದ ಬಳಿಕ ಸಂಪರ್ಕ ತಪ್ಪಿ ಹೋಗಿತ್ತು. ಆರೋಪಿ ಟೆಕ್ಕಿಗೆ ಮದುವೆ ಆದ ಬಳಿಕ ಪುನಃ ಮಾಜಿ ಪ್ರಿಯತಮೆಯ ಸಂಪರ್ಕಕ್ಕೆ ಸಿಕ್ಕಿದ್ದಳು. ಅಂದಿನಿಂದ ಹೆಂಡತಿಯನ್ನ ಕಡೆಗಣಿಸಿ ಆಕೆಯ ಜೊತೆ ಸಂಬಂಧ ಬೆಳೆಸಿಕೊಂಡಿದ್ದ ಬಗ್ಗೆ ಆರೋಪಿ ಹೆಬ್ಬಾಳ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.