ಸಾವಿನಲ್ಲೂ ಒಂದಾದ ದಂಪತಿ – ಪತಿ ಸಾವಿನ ಸುದ್ದಿ ಕೇಳಿ ಪತ್ನಿಗೆ ಹೃದಯಾಘಾತ

Advertisements

ಹುಬ್ಬಳ್ಳಿ: ಇಷ್ಟು ದಿನ ಜೊತೆಗಿದ್ದು, ಚೆಂದದ ಜೀವನ ಸಾಗಿಸಿದ ದಂಪತಿ (Hubballi) ತಮ್ಮ ಸಾವಿನಲ್ಲೂ ಒಂದಾಗಿದ್ದಾರೆ. ಪತಿ ಅಂತ್ಯಕ್ರಿಯೆ ಸಮಯದಲ್ಲಿ ಪತ್ನಿಯೂ ಸಾವನ್ನಪ್ಪಿದ ಘಟನೆ ಧಾರವಾಡ (Dharwad) ಜಿಲ್ಲೆಯಲ್ಲಿ ನಡೆದಿದೆ.

Advertisements

ಹುಬ್ಬಳ್ಳಿ (Hubballi) ತಾಲೂಕಿನ ಶಿರಗುಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶಿವಪುತ್ರಪ್ಪ ನೆಲಗುಡ್ಡ (90) ಹಾಗೂ ಬಸಮ್ಮ (86) ಸಾವಿನಲ್ಲೂ ಒಂದಾದ ದಂಪತಿ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ವೇಳೆ ಪೊಲೀಸರಿಂದ ದೂಡಲ್ಪಟ್ಟ ಕಾಂಗ್ರೆಸ್ ನಾಯಕ – ಕಣ್ಣಿಗೆ ಗಂಭೀರ ಪೆಟ್ಟು

Advertisements

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶಿವಪುತ್ರಪ್ಪ ಅವರು ವಯೋಸಹಜ ಮರಣವನ್ನು ಹೊಂದಿದ್ದರು. ತನ್ನ ಪತಿಯ ಸಾವಿನಿಂದ ತೀವ್ರ ನೋವಿನಲ್ಲಿದ್ದ ಪತ್ನಿ ಬಸಮ್ಮ, ಶಿವಪುತ್ರಪ್ಪ ಅವರ ಅಂತ್ಯಕ್ರಿಯೆ ಸಮಯದಲ್ಲಿ ಹೃದಯಾಘಾತದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: 4 ದಿನದ ಛತ್ ಪೂಜೆಯಲ್ಲಿ 53 ಜನ ಸಾವು- ಆರ್ಥಿಕ ನೆರವು ಘೋಷಿಸಿದ ನಿತೀಶ್ ಕುಮಾರ್

ಕುಟುಂಬಸ್ಥರು ಅಕ್ಕ ಪಕ್ಕವೇ ದಂಪತಿಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ದಂಪತಿಯ ಸಾವಿಗೆ ಕುಟುಂಬಸ್ಥರು ಮಾತ್ರವಲ್ಲದೆ ಗ್ರಾಮಸ್ಥರು ಕೂಡಾ ಕಂಬನಿ ಮಿಡಿದಿದ್ದಾರೆ.

Live Tv

Advertisements
Exit mobile version