ಲವ್ವರ್ ಮಾತು ಕೇಳಿ ಪತಿ ಮೊಬೈಲ್‍ನಿಂದ ಬೆದರಿಕೆ ಮೆಸೇಜ್ ಕಳಿಸಿ ಸಿಕ್ಕಿಬಿದ್ದ ಪತ್ನಿ!

Public TV
1 Min Read
ANEKAL

ಆನೇಕಲ್: ಪತಿ ಹಾಗೂ ಪತ್ನಿ ನಡುವೆ ನಡೆದ ಜಗಳವು ಬೆದರಿಕೆ ಮೆಸೇಜ್ (Message) ಕಳುಹಿಸುವಷ್ಟರ ಮಟ್ಟಕ್ಕೆ ಬೆಳೆದ ಘಟನೆ ಬೆಂಗಳೂರು ಹೊರವಲಯದ ಆನೇಕಲ್‍ನಲ್ಲಿ (Anekal) ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

ಪ್ರಕರಣದ ಹಿನ್ನೆಲೆ: ಆನೇಕಲ್‍ನ ಮಾರುತಿ ಬಡಾವಣೆಯಲ್ಲಿ ಉತ್ತರ ಕರ್ನಾಟಕ (Uttara Karnataka) ಮೂಲದ ಕಿರಣ್ ಮತ್ತು ವಿದ್ಯಾರಾಣಿ ದಂಪತಿ ವಾಸವಿದ್ದರು. ಈ ನಡುವೆ ವಿದ್ಯಾರಾಣಿಗೆ ಸೋಷಿಯಲ್ ಮೀಡಿಯಾ ಅಪ್ ಮೂಲಕ ರಾಮ್‍ಪ್ರಸಾದ್ ಅನ್ನೋ ವ್ಯಕ್ತಿಯ ಪರಿಚಯವಾಗುತ್ತೆ. ಅಂತೆಯೇ ರಾಮ್‍ಪ್ರಸಾದ್ ಜೊತೆ ವಿದ್ಯಾರಾಣಿ ನಿರಂತರ ಚ್ಯಾಟಿಂಗ್ ಮಾಡುತ್ತಿದ್ದಳು.

ಈ ವಿಚಾರ ಪತಿ ಕಿರಣ್‍ಗೆ ಗೊತ್ತಾಗಿ ಮೊಬೈಲ್ ಹೊಡೆದು ಹಾಕಿದ್ದ. ಇದನ್ನು ಬೇರೆ ನಂಬರ್ ಮೂಲಕ ರಾಮ್‍ಪ್ರಸಾದ್‍ಗೆ ವಿದ್ಯಾರಾಣಿ ತಿಳಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಪ್ರಿಯಕರ ರಾಮ್ ಪ್ರಸಾದ್, ವಿದ್ಯಾರಾಣಿ ಗಂಡನಿಗೆ ಬುದ್ಧಿ ಕಲಿಸಲು ಪ್ಲಾನ್ ಮಾಡಿದ್ದ. ಅಂತೆಯೇ ನಾನು ಕಳುಹಿಸುವ ಮೆಸೇಜ್‍ನ ಗಂಡನ ನಂಬರ್‍ನಿಂದ ಫಾರ್ವರ್ಡ್ ಮಾಡು ಅಂತ ಸೂಚನೆ ಕೊಟ್ಟಿದ್ದನು.  ಇದನ್ನೂ ಓದಿ: ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ಪರಿಹಾರದ ಚೆಕ್ ವಿತರಣೆ

ಡಿಸೆಂಬರ್ 5ರಂದು ಆರ್‍ಡಿಎಕ್ಸ್ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕುವ ಮೆಸೇಜ್ ಅನ್ನು ಕಿರಣ್ ನಂಬರ್‍ನಿಂದ ತನಿಖಾ ಸಂಸ್ಥೆಗಳಿಗೆ ರವಾನಿಸುವಂತೆ ಹೇಳುತ್ತಾನೆ. ಪ್ರಿಯಕರನ ಮಾತನ್ನು ನಂಬಿದ ವಿದ್ಯಾರಾಣಿ ಖುದ್ದು ಪೊಲೀಸ್ ಮತ್ತು ಕೇಂದ್ರ ತನಿಖಾ ಸಂಸ್ಥೆಗೆ ಕಳುಹಿಸಿದ್ದಳು. ಬಳಿಕ ಗಂಡನ ಮೊಬೈಲ್‍ನಿಂದ ಮೆಸೇಜ್ ಡಿಲೀಟ್ ಮಾಡಿದ್ದಳು.

ಇತ್ತ ಮೆಸೇಜ್ ಬಂದಿದ್ದ ನಂಬರ್ ನ ಮೂಲ ಹುಡುಕಿ ಹೊರಟಿದ್ದ ತನಿಖಾ ಸಂಸ್ಥೆಗಳು, ಮನೆಗೆ ಬಂದು ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಿಗೆ ಬಂದಿದೆ. ಈ ಸಂಬಂಧ ಆನೇಕಲ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

Share This Article