ಬರ್ಲಿನ್: ಆನ್‍ಲೈನ್ ನಲ್ಲಿ ಸಾಮಾನ್ಯವಾಗಿ ಹಳೆ ವಸ್ತುಗಳನ್ನು ಮಾರಾಟ ಮತ್ತು ಖರೀದಿ ಮಾಡುತ್ತಾರೆ. ಆದರೆ ಜರ್ಮನಿಯ ಮಹಿಳೆಯೊಬ್ಬಳು ಆನ್‍ಲೈನ್ ನಲ್ಲಿ ತನ್ನ ಪತ್ನಿಯನ್ನೇ ಮಾರಾಟಕ್ಕಿದ್ದ ಘಟನೆಯೊಂದು ನಡೆದಿದೆ.
ಈ ಘಟನೆ ಹ್ಯಾಂಬರ್ಗ್ ನ ಜರ್ಮನಿಯಲ್ಲಿ ನಡೆದಿದ್ದು, 40 ವರ್ಷದ ಡೋರ್ಟೆ ಎಲ್ ಮದುವೆಯಾಗಿ ಏಳು ವರ್ಷ ಸಂಸಾರ ಮಾಡಿದ್ದ ಪತಿಯನ್ನೇ ಮಾರಾಟಕ್ಕಿಟ್ಟಿದ್ದಾಳೆ. ಈಕೆ ವೆಬ್ ಸೈಟ್ ಒಂದರಲ್ಲಿ ಪತಿಯನ್ನು ಮಾರಾಟ ಮಾಡುವ ಬಗ್ಗೆ ಪೋಸ್ಟ್ ಬರೆದು ಹಾಕಿದ್ದಾಳೆ. ಕ್ರಿಸ್‍ಮಸ್ ನ ಮೊದಲ ಎರಡು ದಿನದಿಂದ ನಾವು ಜೊತೆಯಾಗಿಲ್ಲ. ನಾನು ನನ್ನ ಪತಿಯನ್ನೇ ಬಿಟ್ಟು ಕೊಡಲು ಬಯಸುತ್ತೇನೆ. ಬೆಲೆಯ ಬಗ್ಗೆ ಮಾತನಾಡಲು ಸಂಪರ್ಕಿಸಿ ಎಂದು ಇ-ಮೇಲ್ ಮಾಡಿದ್ದಾಳೆ.
Advertisement
Advertisement
ಪೋಸ್ಟ್ ನಲ್ಲೇನಿದೆ..?
“ಆಸಕ್ತಿ ಹೊಂದಿರುವ ಮಹಿಳೆಯರಿಗಾಗಿ, ನಾನು ನನ್ನ ಪತಿಯಿಂದ ಬೇಸತ್ತು, ಅವರನ್ನು ಬಿಡಲು ನಿರ್ಧಾರ ಮಾಡಿದ್ದೇನೆ ಎಂದು ಮಹಿಳೆ ತನ್ನ ಪತಿಗೆ 1,439 ರೂ. ಗೆ ಬೆಲೆ ನಿಗದಿ ಮಾಡಿದ್ದಾಳೆ. ಬೆಲೆಯಲ್ಲಿ ಹೆಚ್ಚು- ಕಡಿಮೆ ಮಾಡಿಕೊಳ್ಳಲು ನನಗೆ ಸಂತೋಷವಿದೆ. ಆದರೆ ಇದರಲ್ಲಿ ವಿನಿಮಯ ಇಲ್ಲ. ದಯವಿಟ್ಟು ಇ-ಮೇಲ್ ಮೂಲಕ ವಿಚಾರಣೆ ಮಾಡಿ” ಎಂದು ಬರೆದಿದ್ದಾಳೆ. ಜೊತೆಗೆ ‘ಬಳಕೆಯಾದ ಪತಿ’ ಎಂಬ ತಲೆಬರೆಹ ಕೊಟ್ಟು ಅವರ ಫೋಟೋ ಮತ್ತು ಕ್ರಿಸ್‍ಮಸ್ ಟ್ರೀ ಹಾಕಿದ್ದಾಳೆ.
Advertisement
ಎಲ್ಲರೂ ಈ ಜಾಹೀರಾತನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ. ನನಗೆ ಪಾಸಿಟಿವ್ ಆಗಿ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವರು ನಗುವ ಎಮೋಜಿಯನ್ನು ಕಳುಹಿಸುತ್ತಿದ್ದಾರೆ. ನಾನು ಇನ್ನೂ ಈ ಬಗ್ಗೆ ಮುಚ್ಚಿಡಲು ಇಷ್ಟಪಡುವುದಿಲ್ಲ. ನಾನು ಇದನ್ನು ಕೇವಲ ಮನೋರಂಜನೆಗಾಗಿ ಮಾಡಿದ್ದೆ ಎಂದು ಮಹಿಳೆ ಹೇಳಿದ್ದಾಳೆ.
Advertisement
ಅಚ್ಚರಿ ಎಂದರೆ ಆಕೆಯ ಪತಿಗೆ ಸ್ಥಳೀಯ ಪತ್ರಿಕೆಯಲ್ಲಿ ಈ ಬಗ್ಗೆ ಜಾಹೀರಾತನ್ನು ನೋಡುವವರೆಗೂ ತಿಳಿದಿರಲಿಲ್ಲ ಎಂದು ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv