ಕೋಲಾರ: ಗಂಡ ಬೇಕು ಗಂಡ ಅಂತ ಗಂಡನ ಮನೆ ಎದುರು ಹೆಂಡತಿ ಎರಡು ದಿನಗಳಿಂದ ಧರಣಿ ನಡೆಸುತ್ತಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಜಿಲ್ಲೆಯ ಮಾಲೂರು ತಾಲೂಕು ಭಂಟಹಳ್ಳಿ ಗ್ರಾಮದಲ್ಲಿ ಶಶಿ ಕುಮಾರ್ ಹಾಗೂ ಪ್ರತಿಮಾ ಇಬ್ಬರು ಪ್ರೀತಿಸಿ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದರು. ಪ್ರತಿಮಾ ಗಂಡನಿಗಾಗಿ ತನ್ನ ಪತಿ ಶಶಿಕುಮಾರ್ ಮನೆ ಎದುರು ಶನಿವಾರ ಸಂಜೆಯಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಬೇಕೇ ಬೇಕು ಗಂಡ ಬೇಕೆಂದು ಪ್ರತಿಭಟನೆ ಕುಳಿತ ಪತ್ನಿ
ನಾಲ್ಕು ತಿಂಗಳ ಹಿಂದೆ ಶಶಿಕುಮಾರ್ ಹಾಗೂ ಪ್ರತಿಮಾಗೆ ಪೊಲೀಸರ ಸಮಕ್ಷಮದಲ್ಲಿ ಮದುವೆಯಾಗಿತ್ತು. ಮದುವೆಯಾದ ನಂತರ ನಾಪತ್ತೆಯಾಗಿರುವ ಶಶಿಕುಮಾರ್ ಗಾಗಿ ಹೆಂಡತಿ ಪ್ರತಿಮಾ ಪ್ರತಿಭಟನೆ ನಡೆಸುತ್ತಿದ್ದಾರೆ. ತನ್ನ ಪತಿಯನ್ನು ಹುಡುಕಿಕೊಡುವಂತೆ ಪತಿ ಮನೆ ಮುಂದೆ ಪತ್ನಿ ಧರಣಿ ಆರಂಭಸುತ್ತಿದ್ದಂತೆ ಶಶಿಕುಮಾರ್ ತಂದೆ-ತಾಯಿ ಕೂಡಾ ಮನೆಗೆ ಬೀಗ ಜಡಿದು ಗ್ರಾಮದಿಂದ ನಾಪತ್ತೆಯಾಗಿದ್ದಾರೆ. ಇದನ್ನು ಓದಿ: ಪತಿ ಬೇಕೆಂದು ಮನೆಯ ಮುಂದೆ ಧರಣಿ ಕುಳಿತ ಪತ್ನಿ!
ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.