ತುಮಕೂರು: ಪ್ರೀತಿಸಿ ಮದುವೆಯಾದ(Love Marriage) ಪತ್ನಿಯೊಬ್ಬಳು ತನ್ನ ಕೋಟ್ಯಧಿಪತಿ ಪತಿಯ(Husband) ಮನೆ ಮುಂದೆ ಧರಣಿ(Protest) ಕುಳಿತ ಘಟನೆ ತುಮಕೂರು(Tumkuru) ನಗರದ ವಿದ್ಯಾ ನಗರದಲ್ಲಿ(Vidya Nagar) ನಡೆದಿದೆ.
Advertisement
ವಿದ್ಯಾ ನಗರದ ನಾಲ್ಕನೇ ಕ್ರಾಸಿನಲ್ಲಿರುವ ಪತಿ ಜಿತೇಂದ್ರ ಕುಮಾರ್(Jitendra Kumar) ಅವರ ಬೃಹತ್ ಬಂಗಲೆ ಮುಂದೆ ಪತ್ನಿ ಮಂಜುಳಾ(Manjula) ಧರಣಿ ಕುಳಿತಿದ್ದಾರೆ. ಕಳೆದ ನಾಲ್ಕು ವರ್ಷದ ಹಿಂದೆ ರೈಸ್ ಮಿಲ್ (Rice Mill) ಮಾಲೀಕ ಜಿತೇಂದ್ರ ಕುಮಾರ್ ಹಾಗೂ ಮಂಜುಳಾ ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಅಂತರ್ ಜಾತಿ ವಿವಾಹ(Inter Caste Marriage) ಆಗಿದ್ದರು. ಇದನ್ನೂ ಓದಿ: ಮೊಬೈಲ್ ಕದಿಯಲು ಹೋಗಿ ಕಳ್ಳನ ಫಜೀತಿ – 10 ಕಿ.ಮೀ ಕಿಟಕಿಯಲ್ಲಿ ಜೋತಾಡ್ಕೊಂಡು ಬಂದ
Advertisement
Advertisement
ಕುಡಿತಕ್ಕೆ ದಾಸನಾಗಿದ್ದ ಜಿತೇಂದ್ರ ಕುಮಾರ್ ಲಿವರ್ ಜಾಂಡಿಸ್‍ನಿಂದ (Liver Jaundice) ಜುಲೈ 2 ರಂದು ನಿಧನರಾಗಿದ್ದಾರೆ. ಅತ್ತ ಜಿತೇಂದ್ರ ಕುಮಾರ್ ನಿಧನವಾಗುತ್ತಿದ್ದಂತೆ ಇತ್ತ ಜಿತೇಂದ್ರ ಕುಮಾರ್ ಮನೆಯವರು ಮಂಜುಳಾರನ್ನು ತಮ್ಮ ಮನೆಯೊಳಗೆ ಸೇರಿಸಿಕೊಳ್ಳುತ್ತಿಲ್ಲ. ಕಳೆದ ಎರಡೂವರೆ ತಿಂಗಳಿನಿಂದ ಮಂಜುಳಾ ಪತಿಯ ಮನೆಗೆ ಬಂದು ಹೋಗುತ್ತಿದ್ದಾರೆ. ಮನೆಯೊಳಗೆ ಪ್ರವೇಶ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಜಿತೇಂದ್ರ ಕುಟುಂಬದವರು ಪ್ರವೇಶ ನಿಷೇಧಿಸಿದ್ದಾರೆ. ಇದರಿಂದ ಘಾಸಿಗೊಂಡ ಮಂಜುಳಾ ತನ್ನ ಎರಡೂವರೆ ವರ್ಷದ ಮಗಳೊಂದಿಗೆ ಪತಿ ಮನೆ ಮುಂದೆ ಧರಣಿ ಕುಳಿತಿದ್ದಾರೆ. ಇದನ್ನೂ ಓದಿ: 8 ವರ್ಷದ ಬಳಿಕ ಗೊತ್ತಾಯ್ತು ತನ್ನ ಪತಿ ಅವನಲ್ಲ ಅವಳು – ಗಂಡನ ಲಿಂಗ ಬದಲಾವಣೆ ತಿಳಿದು ಮಹಿಳೆ ಶಾಕ್