ಉಡುಪಿ: ಪತ್ನಿಯೊಬ್ಬಳು ಕುದಿಯುತ್ತಿರುವ ನೀರಿಗೆ ಖಾರದ ಪುಡಿ ಬೆರೆಸಿ ಪತಿ ಮೇಲೆ ಎರಚಿದ ಪ್ರಸಂಗವೊಂದು ಉಡುಪಿಯಲ್ಲಿ (Udupi) ನಡೆದಿದೆ.
ಈ ಘಟನೆ ಕಟಪಾಡಿಯ ಶಂಕರಪುರ (Shankarapura Katapadi) ಎಂಬಲ್ಲಿ ನಡೆದಿದೆ. ಪತಿ ಮೊಹಮ್ಮದ್ ಅಶ್ರಫ್ ಹಾಗೂ ಪತ್ನಿ ಅಫ್ರೀನ್ ನಡುವೆ ಹಲವು ಸಮಯದಿಂದ ವೈಮನಸ್ಸು ಎದ್ದಿತ್ತು. ಗಂಡನ ಅಕ್ರಮ ಸಂಬಂಧದ ಬಗ್ಗೆ ಹೆಂಡತಿಗೆ ಅನುಮಾನ ಇತ್ತು.
ಅಕ್ಟೋಬರ್ ತಿಂಗಳಲ್ಲಿ ಅಫ್ರೀನ್ ಹಾಗೂ ಮೊಹಮ್ಮದ್ ಮದುವೆಯಾಗಿತ್ತು. ಮದುವೆಯಾದ ಬಳಿಕ ಅಫ್ರೀನ್ ಮನೆಯಲ್ಲೇ ಗಂಡ-ಹೆಂಡತಿ ಇದ್ದರು. ಅಫ್ರೀನ್‍ಳಿಗೆ ಮೊಹಮ್ಮದ್ ಆಸೀಫ್ ಬೇರೆ ಹುಡುಗಿಯೊಂದಿಗೆ ಸಂಬಂಧ ಹೊಂದಿರುವುದಾಗಿ ಅನುಮಾನ ವ್ಯಕ್ತವಾಗಿತ್ತು. ಇದನ್ನೂ ಓದಿ: ಮಾತುಬಾರದ ತಾಯಿ ನಾಪತ್ತೆ – ಸುಳಿವುಕೊಟ್ಟವರಿಗೆ 50 ಸಾವಿರ ರೂ. ಘೋಷಿಸಿದ ಮಗಳು
ಇದೇ ವಿಚಾರಕ್ಕೆ ಮನೆಯಲ್ಲಿ ಇಬ್ಬರ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಜಗಳ ನಡೆದು ಪತಿ ಬಾತ್ ರೂಮ್‍ನಿಂದ ಹೊರ ಬರುವಾಗ ಮೆಣಸಿನ ಹುಡಿ ಮಿಶ್ರಿತ ಕುದಿಯುವ ನೀರನ್ನು ಪತ್ನಿ ಎರಚಿದ್ದಾಳೆ. ಬಳಿಕ ಗಾಯಗೊಂಡ ಪತಿಯನ್ನು ರೂಮಿನಲ್ಲಿಯೇ ಕೂಡಿ ಹಾಕಿದಾಳೆ. ಅಲ್ಲದೆ ಬೇರೆಯವರಿಗೆ ತಿಳಿಸಿದ್ರೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾಳೆ.
ಈ ಬಗ್ಗೆ ಪತಿ ಮೊಹಮ್ಮದ್ ಆಸೀಫ್ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]