ಬೆಂಗಳೂರು: ಪತಿಯ ಕೋಟಿ ಕೋಟಿ ಆಸ್ತಿ ಪಡೆಯಲು ಮಹಿಳೆಯೊಬ್ಬರು ಮೈದುನನ ಜೊತೆ ಸೇರಿದ ಗಂಡನ ಹತ್ಯೆಗೆ ಪ್ಲಾನ್ ಮಾಡಿ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಗರದ ಹೊರ ವಲಯದ ನೆಲಮಂಗಲ ತಾಲೂಕಿನ ಕುಲವನಹಳ್ಳಿ ಬಳಿ ನಡೆದಿದೆ.
ಮೂಲತಃ ತುಮಕೂರು ಜಿಲ್ಲೆಯ ಬೆಳ್ಳಾವಿ ಮೂಲದ ರಂಗಸ್ವಾಮಿ ಹಲ್ಲೆಗೊಳಾಗದ ಪತಿ. ತನ್ನ ಪತ್ನಿ ನೇತ್ರಾವತಿ ಹಾಗೂ ಸಂಬಂಧಿಗಳೇ ನನ್ನನ್ನು ಕೊಲೆ ಮಾಡಲು ಹಲ್ಲೆ ನಡೆಸಿದ್ದಾರೆ ಎಂದು ರಂಗಸ್ವಾಮಿ ಆರೋಪ ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪತ್ನಿ ನೇತ್ರಾವತಿ, ಸಹೋದರ ಲೋಕೇಶ್ ಹಾಗೂ ಮಾವ ರಾಜಣ್ಣರ ವಿರುದ್ಧ ದೂರು ದಾಖಲಿಸಿದ್ದಾರೆ.
Advertisement
Advertisement
ಹೆಂಡತಿ ನೇತ್ರಾವತಿ ಹಾಗೂ ಸಹೋದರ ಲೋಕೇಶ್ ನಡುವೆ ಅಕ್ರಮ ಅಕ್ರಮ ಸಂಬಂಧ ಇದ್ದು, ಇಬ್ಬರು ಆಸ್ತಿಗಾಗಿ ನನ್ನನ್ನು ಕೊಲೆ ಮಾಡಲು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ಹಿಂದೆ ಮನೆಯಲ್ಲೂ ಕೂಡಿ 7 ಮಂದಿ ಚಿತ್ರಹಿಂಸೆ ನೀಡಿದ್ದರು. ನನ್ನ ಸಂಬಂಧಿಗಳಿಂದಲೇ ಪ್ರಾಣ ಭಯ ಇರುವುದರಿಂದ ಗ್ರಾಮ ಬಿಟ್ಟು ರಕ್ಷಣೆಗಾಗಿ ನಗರಕ್ಕೆ ಆಗಮಿಸಿದ್ದೇನೆ. ಕಳೆದ ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು, ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv