ಬೆಂಗಳೂರು: ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ನಡೆದಿದೆ.
ಕುಂದಾಪುರ ಮೂಲದ ಸಂತೋಷ್ ಶೆಟ್ಟಿ ಕೊಲೆಯಾದ ಪತಿ. ಗಾಂಧಿನಗರದಲ್ಲಿ ಹೊಟೇಲ್ ಉದ್ಯಮ ನಡೆಸಿಕೊಂಡಿದ್ದ ಸಂತೋಷ್ ಶೆಟ್ಟಿ ಅನ್ನಪೂರ್ಣೇಶ್ವರಿ ಶೆಟ್ಟಿ ಎಂಬವರನ್ನು ಮದುವೆಯಾಗಿದ್ದರು.
ಪತ್ನಿ ಅನ್ನಪೂರ್ಣೇಶ್ವರಿ ಶೆಟ್ಟಿಗೆ ಪ್ರಕಾಶ್ ಅನ್ನೋ ವ್ಯಕ್ತಿಗೆ ಜೊತೆಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಈ ಸಂಬಂಧಕ್ಕೆ ಅಡ್ಡವಾಗಿದ್ದ ಸಂತೋಷ್ ಶೆಟ್ಟಿಯನ್ನು ಮುಗಿಸಬೇಕು ಅಂತಾ ಪ್ಲಾನ್ ಮಾಡಿದ ಇಬ್ಬರು, ತಲೆಗೆ ಬಲವಾದ ಆಯುಧದಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ರು. ನಂತ್ರ ಯಾರಿಗೂ ಅನುಮಾನ ಬಾರದಿರಲಿ ಅಂತಾ ಕಾಲು ಜಾರಿ ಬಿದ್ದಿದ್ದಾರೆ ಅಂತಾ ಹತ್ತಿರದ ಅಪೋಲೋ ಆಸ್ಪತ್ರೆಗೆ ಸೇರಿಸಿದ್ದಾರೆ. ಇದನ್ನೂ ಓದಿ: ಮಗಳನ್ನು ಮದುವೆ ಮಾಡಿಕೊಡಿ ಎಂದಿದ್ದಕ್ಕೆ ಪ್ರೇಮಿಗೆ ಮಾರಣಾಂತಿಕ ಹಲ್ಲೆ
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಪ್ರಿಯಕರ ಪ್ರಕಾಶ್ ಮತ್ತು ಪತ್ನಿ ಅನ್ನಪೂರ್ಣೇಶ್ವರಿ ಶೆಟ್ಟಿಯನ್ನು ವಿಚಾರಣೆ ಮಾಡಿದ ವೇಳೆ ನಾವೇ ಕೊಲೆ ಮಾಡಿದ್ದು ಅಂತಾ ತಪ್ಪು ಒಪ್ಪಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv