ಮೈಸೂರು: ಗಲಾಟೆ ಮಾಡಿದನೆಂದು ಸಿಟ್ಟಿನಿಂದ ಪತ್ನಿಯೊಬ್ಬಳು ತನ್ನ ಪತಿಯ ಮರ್ಮಾಂಗಕ್ಕೇ ಹೊಡೆದು ಕೊಲೆಗೈದ ವಿಲಕ್ಷಣ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ.
ಈ ಘಟನೆ ಸರಗೂರು ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಬಸವರಾಜಪ್ಪ (42) ಕೊಲೆಯಾದ ವ್ಯಕ್ತಿಯಾಗಿದ್ದು, ಈತನನ್ನು ಪತ್ನಿ ನೇತ್ರಾವತಿ ಕೊಲೆ ಮಾಡಿದ್ದಾಳೆ.
Advertisement
Advertisement
ರಾತ್ರಿ ಮದ್ಯ ಸೇವಿಸಿ ಬಂದ ಬಸವರಾಜಪ್ಪ ಪತ್ನಿ ನೇತ್ರಾವತಿ ಜೊತೆ ಗಲಾಟೆ ಮಾಡಿದ್ದನು. ಈ ವೇಳೆ ಕೋಪಗೊಂಡ ಪತ್ನಿ ಬಸವರಾಜಪ್ಪನ ಮರ್ಮಾಂಗಕ್ಕೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾಳೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಬಸವರಾಜಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಪತ್ನಿ ಜೊತೆ ಸ್ನೇಹಿತನ ವಾಟ್ಸಾಪ್ ಚಾಟಿಂಗ್ – ಪಕ್ಕದ್ಮನೆ ಗೆಳೆಯನ ಕೊಂದು ಸುಟ್ಟಾಕಿದ್ರು!
Advertisement
Advertisement
ಘಟನೆ ಸಂಬಂಧ ಪೊಲೀಸರು ಪತ್ನಿ ನೇತ್ರಾವತಿಯನ್ನು ಬಂಧಿಸಿದ್ದಾರೆ. ಈ ಕುರಿತು ಸರಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.