ಬೆಂಗಳೂರು: ಕಳ್ಳಿ, ಕಳ್ಳಿ ಎಂದು ಎಲ್ಲರೂ ವ್ಯಂಗ್ಯ ಮಾಡುವುದರಿಂದ ಬೇಸತ್ತ ಪತಿ ಮಹಾಶಯನೊನ್ನ ತನ್ನ ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಸರಿತಾ (35) ಕೊಲೆಯಾದ ಪತ್ನಿ. ಈಕೆಯನ್ನು ಪತಿ ತಾರಾನಾಥ್ ಕೊಲೆ ಮಾಡಿದ್ದಾನೆ. ಈ ದಂಪತಿ ಮೂಲತಃ ಮಂಗಳೂರಿನವರು (Mangaluru). ಇದನ್ನೂ ಓದಿ: ಮಂತ್ರಿಗಳ ಮಾನಗೇಡಿ ಕೃತ್ಯಗಳನ್ನೂ ಸಮರ್ಥಿಸಿಕೊಳ್ಳೋ ಲಜ್ಜೆಗೇಡಿ ಸಿಎಂ ಈ ರಾಜ್ಯಕ್ಕೆ ವಕ್ಕರಿಸಿದ್ದಾರೆ: ಹೆಚ್‍ಡಿಕೆ
- Advertisement
ಕೊಲೆ ಯಾಕೆ..?: ಪತ್ನಿ ಸರಿತಾ ಮೇಲೆ ಕಳ್ಳತನದ ಆರೋಪ ಕೇಳಿಬಂದಿತ್ತು. ನಂತರ ಬೆಂಗಳೂರಿನ ವೈಟ್ ಫೀಲ್ಡ್ ಗೆ ಶಿಫ್ಟ್ ಆಗಿದ್ರು. ಬಳಿಕ ಕೂಡ ಸಂಬಂಧಿಕರು, ಪರಿಚಿತರು ಸರಿತಾಳನ್ನು ಕಳ್ಳಿ ಕಳ್ಳಿ ಅಂತ ವ್ಯಂಗ್ಯ ಮಾಡುತ್ತಿದ್ದರು. ಇದರಿಂದ ಬೇಸತ್ತ ಪತಿ ತರಾನಾಥ್ ಪತ್ನಿಯನ್ನು ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
- Advertisement
ನಂತರ ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿ ವಿಫಲವಾಗಿ ತಾನೇ ಪೊಲೀಸರ ಮುಂದೆ ಶರಣಾಗಿದ್ದಾನೆ. ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Web Stories