ಹಾವೇರಿ: ಪತಿಯೇ ಪರದೈವ ಅಂತಾರೆ. ಆದ್ರೆ ಇಲ್ಲೊಬ್ಬಳು ಸಪ್ತಪದಿ ತುಳಿದು ಕೈಹಿಡಿದ ಗಂಡನನ್ನೆ ಹತ್ಯೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಗುಂಡೂರು ಗ್ರಾಮದಲ್ಲಿ ನಡೆದಿದೆ.
ಜೂನ್ 5 ರಂದು ರಾಜು ದೊಡ್ಡಮನಿ ಗ್ರಾಮದಿಂದ ಕಣ್ಮರೆಯಾಗಿದ್ದರು. ರಾಜುನ ಸಂಬಂಧಿಕರು ಮತ್ತು ಗ್ರಾಮಸ್ಥರು ಸಾಕಷ್ಟು ಹುಡುಕಾಟ ನಡೆಸಿದ್ದರು. ಆದ್ರೆ ಇತ್ತ ತನಗೆ ಏನೂ ಗೊತ್ತೇ ಇಲ್ಲ ಅನ್ನುವಂತೆ ರಾಜುನ ಪತ್ನಿ ಗೀತಾ(25) ಪತಿ ಮಿಸ್ಸಿಂಗ್ ಆಗಿದ್ದಾನೆ. ಹುಡುಕಿಕೊಡಿ ಅಂತಾ ಹಾನಗಲ್ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 16 ರಂದು ದೂರು ದಾಖಲಿಸಿದ್ದಳು.
Advertisement
Advertisement
ಪೊಲೀಸರು ದೂರು ದಾಖಲಿಸಿಕೊಂಡಿದ್ದು ಬಿಟ್ಟರೆ ಹುಡುಕೋ ಪ್ರಯತ್ನ ಮಾಡಿರಲಿಲ್ಲ. ಪ್ರಕರಣ ದಾಖಲಾಗಿ ಒಂದೂವರೆ ತಿಂಗಳು ಕಳೆದ್ರೂ ರಾಜುನ ಸುಳಿವು ಸಿಗ್ಲಿಲ್ಲ. ಆದ್ರೆ ಪತಿ ಮಿಸ್ಸಿಂಗ್ ಕೇಸ್ ದಾಖಲಿಸಿದ ನಂತರ ಪತ್ನಿ ಗೀತಾ ತವರು ಮನೆ ಸೇರಿದ್ದಳು. ಆಗಾಗ ಊರಿಗೆ ಬಂದು ಹೋಗುತ್ತಿದ್ದಳು. ಇದರಿಂದ ಸಂಶಯಗೊಂಡ ಗ್ರಾಮಸ್ಥರು, ರಾಜುನ ಸಂಬಂಧಿಕರ ಸಮ್ಮುಖದಲ್ಲಿ ಗೀತಾಳನ್ನ ಕರೆದು ವಿಚಾರಿಸಿದ್ದಾರೆ.
Advertisement
Advertisement
ಈ ವೇಳೆ ಪತಿ-ಪತ್ನಿ ನಡುವೆ ಜಗಳವಾಗಿತ್ತು. ಹೀಗಾಗಿ ಪತ್ನಿ ತನ್ನ ಪ್ರೀಯಕರನ ಜೊತೆ ಸೇರಿ ಕೊಲೆ ಮಾಡಿ, ಗ್ರಾಮದ ಬಳಿ ಇರೋ ಕಾಡಿನಲ್ಲಿ ಮೃತದೇಹವನ್ನ ಮುಚ್ಚಿಹಾಕಿರುವುದು ಬೆಳಕಿಗೆ ಬಂದಿದೆ.
ಸದ್ಯ ಆರೋಪಿ ಗೀತಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv