CrimeDistrictsLatestMain PostRaichur

ಮಾವನ ನಿವೃತ್ತಿ ಹಣಕ್ಕಾಗಿ ಪತ್ನಿಯನ್ನುಕೊಲೆಗೈದ ಪತಿ ಬಂಧನ

ರಾಯಚೂರು: ಪತ್ನಿ ತಂದೆಯ ನಿವೃತ್ತಿ ಹಣಕ್ಕಾಗಿ ಕಿರುಕುಳ ಮಾಡಿ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಗರದ ಅಂದ್ರೂನ್‍ಕಿಲ್ಲಾದಲ್ಲಿ ನಡೆದಿದೆ.

ಆಸ್ಮಾ ಬಾನು ( 30) ಸಾವನ್ನಪ್ಪಿರುವ ಮಹಿಳೆ. ಪತಿ ಫಸಲುದ್ದೀನ್ ಹಾಗೂ ಮನೆಯವರು ಹಣಕ್ಕಾಗಿ ಕಿರುಕುಳ ನೀಡಿ ಕೊಲೆ ಮಾಡಿರುವ ಬಗ್ಗೆ ಆರೋಪಿಸಲಾಗಿದೆ. ಮೃತಳ ತಾಯಿ ಹಾಗೂ ಸಂಬಂಧಿಕರು ಗಂಡನ ಮನೆಯವರ ವಿರುದ್ದ ಆರೋಪಿಸಿದ್ದಾರೆ.

BRIBE

ಹಣಕ್ಕಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಕೊಲೆ ಮಾಡಿರುವ ಬಗ್ಗೆ ಆರೋಪ ಕೇಳಿಬಂದಿದೆ. ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿ ಫಸಲುದ್ದೀನ್ ನನ್ನ  ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ಮುಂದುವರೆದಿದೆ. ಇದನ್ನೂ ಓದಿ: ಹತ್ತು ವರ್ಷ ಹಾಸನ ಜಿಲ್ಲೆಗೆ ಎರಡು ಪಕ್ಷಗಳ ಕೊಡುಗೆ ಏನು: ರೇವಣ್ಣ ಪ್ರಶ್ನೆ

MONEY

ಆಸ್ಮಾ ಹಾಗೂ ಫಸಲುದ್ದೀನ್‍ಗೆ ಮದ್ವೆಯಾಗಿ ಒಂಬತ್ತು ವರ್ಷವಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಮೃತ ಆಸ್ಮಾ ಬಾನು ತಂದೆ ಕೆಎಸ್‍ರ್‌ಟಿಸಿ ನಿವೃತ್ತ ನೌಕರ. ತಂದೆಗೆ ಬಂದಿರುವ ನಿವೃತ್ತಿ ಹಣ ತೆಗೆದುಕೊಂಡು ಬರುವಂತೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಅಂತ ಮೃತಳ ಕಡೆಯವರು ಆರೋಪಿಸಿದ್ದಾರೆ. ಘಟನೆ ಹಿನ್ನೆಲೆ ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಹತ್ತು ಮೀಟರ್ ಆಳದಲ್ಲಿ ಸ್ಕೂಬಾ ಡೈವ್ ಮಾಡಿದ್ರು ಅಪ್ಪು

Leave a Reply

Your email address will not be published. Required fields are marked *

Back to top button