ಹಾಸನ: ಎಂಟು ವರ್ಷ ಪತಿಯೊಂದಿಗೆ ಸಂಸಾರ ನಡೆಸಿ ಇದೀಗ ಪ್ರಿಯಕರನ ಜೊತೆ ಪತ್ನಿ ಮದುವೆಯಾಗಿರುವ ಘಟನೆ ಹಾಸನ (Hassan) ತಾಲ್ಲೂಕಿನ ಮುಕುಂದೂರು (Mukunduru) ಗ್ರಾಮದಲ್ಲಿ ನಡೆದಿದೆ.
ಪತಿಯನ್ನು ಮುಕುಂದೂರು ಗ್ರಾಮದ ಪ್ರಕಾಶ್ ಹಾಗೂ ಪತ್ನಿಯನ್ನು ಅರಕಲಗೂಡು (Arkalgud) ತಾಲ್ಲೂಕಿನ ಮುಂಡಗೋಡು ಗ್ರಾಮದ ಹರ್ಷಿತಾ ಎಂದು ಗುರುತಿಸಲಾಗಿದ್ದು, ಪ್ರಿಯಕನ ಜೊತೆ ಮದುವೆಯಾದ ಗೃಹಿಣಿ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇಯಲ್ಲಿ ಡಿವೈಡರ್ಗೆ ಡಿಕ್ಕಿಯಾಗಿ ಕಾರು ಪಲ್ಟಿ – ಓರ್ವ ಸಾವು
ಕಳೆದ ಎಂಟು ವರ್ಷಗಳ ಹಿಂದೆ ಅಂದರೆ 2017ರ ಮಾ.30ರಂದು ಪ್ರಕಾಶ್ ಅವರು ಸ್ವಂತ ಅತ್ತೆ ಮಗಳಾದ ಹರ್ಷಿತಾಳನ್ನು ಮದುವೆಯಾಗಿದ್ದರು. ದಂಪತಿಗೆ 7 ವರ್ಷದ ಗಂಡು ಮಗುವಿದೆ. ಕಳೆದ ಮಾ.30ರಂದು ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೋಗಿದ್ದ ಹರ್ಷಿತಾ ಮತ್ತೆ ಮನೆಗೆ ವಾಪಸ್ಸಾಗಿರಲಿಲ್ಲ. ಹೀಗಾಗಿ ಹರ್ಷಿತಾ ಪೋಷಕರು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆಗ ಪೊಲೀಸರು ಹರ್ಷಿಳಾನ್ನು ಪತ್ತೆ ಹಚ್ಚಿದ್ದರು.
ಠಾಣೆಗೆ ಕರೆಸಿದಾಗ, ನಾನು ಪತಿ ಜೊತೆ ಹೋಗುವುದಿಲ್ಲ. ಪ್ರಿಯಕರ ಸಚಿನ್ ಜೊತೆ ಹೋಗುತ್ತೇನೆ ಹರ್ಷಿತಾ ಹಠ ಹಿಡಿದಿದ್ದಳು. ನಂತರ ಪೊಲೀಸರು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದ್ದರು. ಬಳಿಕ ಹರ್ಷಿತಾ ಅನಾರೋಗ್ಯದ ನಾಟಕವಾಡಿ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಸಾಂತ್ವಾನ ಕೇಂದ್ರದಿಂದ ಹೊರಬಂದು, ಪ್ರಿಯಕರನ ಜೊತೆ ಕಾರಿನಲ್ಲಿ ವಿವಾಹವಾಗಿದ್ದರು.
ಮದುವೆಯಾದ ಬಳಿಕವೂ ಪತಿ ಪ್ರಕಾಶ್ ಪತ್ನಿಯ ತಪ್ಪನ್ನು ಕ್ಷಮಿಸಿ ಮನೆಗೆ ಕರೆದುಕೊಂಡು ಬಂದಿದ್ದರು. ಒಂದು ದಿನ ಪತಿಗೆ ಜೊತೆಗೆ ಇದ್ದು, ಮಾರನೇ ದಿನ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಾಳೆ. ಸದ್ಯ ಪತಿ ಪ್ರಕಾಶ್ ಪತ್ನಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ

