-ಬೀದಿಗೆ ಬಂತು 13 ವರ್ಷದ ಸಂಸಾರ
ಹಾಸನ: ಮದುವೆಯಾಗಿ 13 ವರ್ಷ ಸಂಸಾರ ಮಾಡಿ ಇಬ್ಬರು ಮಕ್ಕಳಾಗಿರುವ ಪತಿ-ಪತ್ನಿ ಜಗಳ ಬೀದಿಗೆ ಬಿದ್ದಿರುವ ಪ್ರಕರಣ ಹಾಸನದಲ್ಲಿ ನಡೆದಿದೆ.
ಪತಿ ಚಂದ್ರು ಮೇಲೆ ಮಚ್ಚಿನಿಂದ ಹಲ್ಲೆಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ನನ್ನ ಪತಿ ನನಗೆ ಹೊಡೀತಾನೆ ಅವನು ನನಗೆ ಬೇಡ ಎಂದು ಪತ್ನಿ ವಾದ ಮಾಡುತ್ತಿದ್ದಾಳೆ. ನನ್ನ ಪತ್ನಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾಳೆ ಅವಳು ಸರಿ ಇಲ್ಲ ಎಂಬುದು ಪತಿಯ ಅಳಲಾಗಿದೆ. ಇದೀಗ ಇವರಿಬ್ಬರ ಜಗಳ ಬೀದಿಗೆ ಬಂದಿದ್ದು, ಇಬ್ಬರೂ ಕೂಡ ಒಬ್ಬೊಬ್ಬರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಿಯಕರ ಚೇತನ್
ಜಿಲ್ಲೆಯ ಹೊಳೇನರಸೀಪುರ ತಾಲೂಕಿನ ಕಡವಿನಹೊಸಳ್ಳಿ ಗ್ರಾಮದ ಚಂದ್ರುಗೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ನಿವಾಸಿ ರೂಪಾಳ ಜೊತೆ 13 ವರ್ಷದ ಹಿಂದೆ ಮದುವೆಯಾಗಿತ್ತು. ಸಕಲೇಶಪುರದಲ್ಲಿ ವಾಸವಿದ್ದ ಇವರಿಬ್ಬರಿಗೆ ಇಬ್ಬರು ಮಕ್ಕಳೂ ಕೂಡ ಇದ್ದಾರೆ. ಆದರೆ ಪತ್ನಿಯ ನಡವಳಿಕೆ ಸರಿ ಇಲ್ಲ ಆಕೆ ವೈಶ್ಯಾವಾಟಿಕೆ ಮಾಡುತ್ತಿದ್ದಾಳೆ. ನನಗೆ ನನ್ನಿಬ್ಬರು ಮಕ್ಕಳೂ ಕೊಟ್ಟರೆ ಸಾಕು. ನಾನು ನನ್ನ ಪಾಡಿಗೆ ಇರುತ್ತೇನೆ ಎಂದು ಚಂದ್ರು ಮನವಿ ಮಾಡಿಕೊಂಡಿದ್ದಾರೆ.
ಪತಿ ಆರೋಪ:
ನಾನು ಕೂಲಿ ಕೆಲಸಕ್ಕೆ ಹೋಗಿದ್ದ ವೇಳೆ ಬೇರೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ನನ್ನ ಮನೆಯಲ್ಲೇ ಚಕ್ಕಂದ ಆಡುತ್ತಿದ್ದಳು. ಇದನ್ನು ನಾನು ಕಣ್ಣಾರೆ ಕಂಡು, ಪೊಲೀಸರಿಗೂ ದೂರು ನೀಡಿದ್ದೆ. ಆ ಬಳಿಕ ನನಗೆ ತಿಳಿಯದ ರೀತಿಯಲ್ಲಿ ಏಕಾಏಕಿ ಮನೆ ಖಾಲಿ ಮಾಡಿಕೊಂಡು ಹಾಸನಕ್ಕೆ ಬಂದು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಳು. ತನ್ನ ಧನದಾಹಕ್ಕೆ ಎಷ್ಟೋ ಹುಡುಗಿಯರ ಬಾಳು ಹಾಳು ಮಾಡಿದ್ದಾಳೆ. ಇಂಥವಳ ಬಳಿ ನನ್ನ ಮಕ್ಕಳು ಇರಬಾರದು ಎಂದು ಕರೆತರಲು ಹೋದಾಗ ಚೇತನ್ ಹಾಗೂ ಇತರರೊಂದಿಗೆ ಸೇರಿಕೊಂಡು ನನ್ನನ್ನು ಕೊಲ್ಲಲು ಯತ್ನಿಸಿದಳು ಎಂದು ಪತಿ ಚಂದ್ರು ಆರೋಪಿಸಿದ್ದಾರೆ.
ಪತ್ನಿ ಸಮರ್ಥನೆ:
ಹಲ್ಲೆಯಿಂದ ಚಂದ್ರುವಿನ ಕೈ ಹಾಗೂ ಇತರೆ ಭಾಗಗಳಿಗೆ ಹಾನಿಗಳಾಗಿದ್ದು, ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನಗೆ ಜೀವ ಬೆದರಿಕೆ ಇದ್ದು ರಕ್ಷಣೆ ಬೇಕು ಎಂದು ಮೊರೆ ಇಡುತ್ತಿದ್ದಾರೆ. ಇತ್ತ ನಾನು ಈ ಸ್ಥಿತಿಗೆ ಬರಲು ಗಂಡನೇ ಕಾರಣ ಎಂದು ಸಬೂಬು ಹೇಳುತ್ತಿರುವ ರೂಪಾ ವಿವಾದ ಕೋರ್ಟ್ ಮೆಟ್ಟಿಲೇರಿದೆ. ಅಲ್ಲಿ ತೀರ್ಮಾನ ಆಗೋವರೆಗೂ ನಾನು ಮಕ್ಕಳನ್ನು ಕೊಡುವುದಿಲ್ಲ. ನಾನು ಸರಿಯಿಲ್ಲ, ಆದರೆ ಅವನು ನನಗೆ ಬೇಡ. ಅಷ್ಟಕ್ಕೂ ನಾನು ಕೊಲೆ ಮಾಡಿಸಲು ಹೋಗಿಲ್ಲ ಎಂದು ಸಮರ್ಥನೆ ಕೊಡುತ್ತಿದ್ದಾಳೆ.
ಗಂಡನ ಮನೆಯವರು ಕಿರುಕುಳ ನೀಡಿದರು ಅನ್ನೋ ನೆಪವೊಡ್ಡಿ, ವೇಶ್ಯಾವಾಟಿಕೆ ದಂಧೆಗೆ ಇಳಿದು ಅನೇಕ ಸಲ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ ರೂಪಾ, ಇದೀಗ ಕಣ್ಣೀರಿಡುವಂತಾಗಿದೆ. ಇಂಥವಳಿಗೆ ತಕ್ಕ ಶಾಸ್ತಿ ಮಾಡಿ ಅನ್ನೋದು ಚಂದ್ರು ಮನವಿಯಾಗಿದೆ. ಈ ನಡುವೆ ರೂಪಾಳಿಗೆ ಸಹಕಾರ ನೀಡಿದ ಆರೋಪ ಹಿನ್ನೆಲೆಯಲ್ಲಿ ಆಕೆಯ ಸಂಬಂಧಿ ಚೇತನ್ ಎಂಬಾತನನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv