ಲಕ್ನೋ: ಮಹಿಳೆಯೊಬ್ಬಳು ತನ್ನ ಸಹೋದರಿಯ ಪತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಆದರೆ ಇದಕ್ಕೆ ಪತಿ ಅಡ್ಡಿಯಾಗುತ್ತಾನೆಂದು ಆತನನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ನೌರಂಗಾಬಾದ್‍ನಲ್ಲಿ ನಡೆದಿದೆ.
ರಂಜೀತ್ ಚೌಹಾಣ್(30) ಕೊಲೆಯಾದ ಪತಿ. ಆರೋಪಿ ಪತ್ನಿ ಕುಂಕುಮ್ ಚೌಹಾಣ್ ತನ್ನ ಸಹೋದರ, ತಂದೆ ಮತ್ತು ಪ್ರಿಯಕರ ಧೀರಜ್ ಚೌಹಾಣ್ (ತಂಗಿಯ ಪತಿ) ಸಹಾಯದಿಂದ ಕೊಲೆ ಮಾಡಿದ್ದಾಳೆ ಎಂದು ರಂಜೀತ್ ಪೋಷಕರು ಆರೋಪಿಸಿದ್ದಾರೆ.
ಆರೋಪಿ ರಂಜೀತ್ ಚೌಹಾಣ್ ತನ್ನ ಸ್ವಂತ ತಂಗಿಯ ಪತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇದಕ್ಕೆ ಪತಿ ಅಡ್ಡಿಯಾಗುತ್ತಾನೆಂದು ಆರೋಪಿ, ಪತಿ ದಿನ ಕುಡಿದು ಬಂದು ನನ್ನ ಹಲ್ಲೆ ಮಾಡುತ್ತಾನೆಂದು ಸುಳ್ಳು ಹೇಳಿ ತನ್ನ ತವರು ಮನೆಯಲ್ಲಿ ವಾಸವಾಗಿದ್ದಳು. ಶನಿವಾರ ರಂಜೀತ್ ಮನೆಯಿಂದ ಹೊರಗಡೆ ಹೋದಾಗ ನಾಲ್ವರು ಸೇರಿಕೊಂಡು ತಲೆಗೆ ಬಲವಾಗಿ ಹೊಡೆದಿದ್ದಾರೆ. ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿ ವಿಜಯ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ಇತ್ತ ತುಂಬಾ ಸಮಯವಾದರೂ ರಂಜೀತ್ ಮನೆಗೆ ಬಂದಿಲ್ಲ ಎಂದು ಆತನ ಸಹೋದರ ಹುಡುಕಿಕೊಂಡು ಹೋಗಿದ್ದಾರೆ. ಆಗ ರಂಜೀತ್ ಮೃತದೇಹ ಪತ್ತೆಯಾಗಿದೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಪೊಲೀಸರು ನಾಲ್ವರ ವಿರುದ್ಧ ದೂರು ದಾಖಲಿಸಿಕೊಂಡು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.