ಬೆಂಗಳೂರು: ಅಪ್ಪ ಹಾಗೂ ಮಗ ಬಿರಿಯಾನಿ ತಿಂದಿದಕ್ಕೆ ಪತ್ನಿ ಮನೆ ಬಿಟ್ಟು ಹೋದ ಘಟನೆಯೊಂದು ಬೆಂಗಳೂರಿನ ಕಮ್ಮಗೊಂಡನಹಳ್ಳಿಯಲ್ಲಿ ನಡೆದಿದೆ.
ಅನಿತಾ ಸರ್ಕಾರ್ (ಹೆಸರು ಬದಲಾಯಿಸಲಾಗಿದೆ) ಮನೆ ಬಿಟ್ಟು ಹೋದ ಗರ್ಭಿಣಿ. ಪತಿ ರಾಜು ಮನೆಗೆ ಬಿರಿಯಾನಿ ತಂದು ತನ್ನ ಮಗ ಆದರ್ಶ್ ಜೊತೆ ತಿನ್ನುತ್ತಿದ್ದರು. ಆದರೆ ಬಿರಿಯಾನಿ ವಾಸನೆ ಆಗಲ್ಲ ಎಂದು ಅನಿತಾ ಜಗಳವಾಡಿದ್ದಾಳೆ. ಪತಿ ಜೊತೆ ಜಗಳವಾಡಿದ ನಂತರ ನಾನು ಇನ್ಮುಂದೆ ಅಡುಗೆ ಮಾಡೋದಿಲ್ಲ ಎಂದು ಅನಿತಾ ಹೇಳಿದಳು.
ನಂತರ ಪತಿ ರಾಜು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಅನಿತಾ ಮನೆ ಬಿಟ್ಟು ಹೋಗಿದ್ದಾರೆ. ಸದ್ಯ ಈ ಬಗ್ಗೆ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ?
7 ವರ್ಷಗಳ ಹಿಂದೆ ಅನಿತಾ ಜೊತೆ ಮದುವೆಯಾಗಿದೆ. ನಾನು ಹಾಗೂ ಅನಿತಾ ಬೇರೆ ಮನೆ ಮಾಡಿಕೊಂಡು ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದೀವಿ. ಆದರೆ ಆಕೆ ನನಗೆ ಹುಷಾರಿಲ್ಲ ಎಂದು ಹೇಳಿದಳು ಆಗ ನಾನು 300 ರೂ. ಕೊಟ್ಟು ಆಸ್ಪತ್ರೆ ಬಳಿ ಬಿಟ್ಟು ಬಂದೆ. ಆದರೆ ಅನಿತಾ ವಾಪಸ್ ಮನೆಗೆ ಬರಲಿಲ್ಲ. ನಂತರ ಸಂಜೆ 4 ಹಂಟೆಗೆ ನಾನು ಅನಿತಾಗೆ ಫೋನ್ ಮಾಡಿದಾಗ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಬಳಿಕ ನಾನು ಆಕೆಯ ತಂದೆ, ತಾಯಿ ಹಾಗೂ ಸಂಬಂಧಿಕರನ್ನು ವಿಚಾರಿಸಿದೆ. ಅಲ್ಲದೇ ಆಕೆಯನ್ನು ಹುಡುಕಿದೆ. ಆದರೆ ಅನಿತಾ ಎಲ್ಲೂ ಪತ್ತೆಯಾಗದಿದ್ದಾಗ ರಾತ್ರಿ 10.15 ಕ್ಕೆ ಠಾಣೆಗೆ ಬಂದು ಪತ್ನಿಯನ್ನು ಹುಡುಕಿ ಕೊಡುವುದಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv