– ಪತ್ನಿ ಜೊತೆ ಪ್ರಿಯಕರ ಅರೆಸ್ಟ್
ಬೀದರ್ : ಅನೈತಿಕ ಸಂಬಂಧವನ್ನು (Illicit affairs) ಪ್ರಶ್ನೆ ಮಾಡಿದ್ದಕ್ಕೆ ಪತಿಯನ್ನೇ (Husband) ಸಂಚು ರೂಪಿಸಿ ಪತ್ನಿ (Wife) ಹಾಗೂ ಪ್ರಿಯಕರ ಸೇರಿ ಕೊಲೆ ಮಾಡಿದ ಪ್ರಕರಣವನ್ನು ಕೊನೆಗೂ ಬೀದರ್ ಪೊಲೀಸರು (Bidar Police) ಬೇಧಿಸಿದ್ದಾರೆ.
Advertisement
ಅಮಿತ್ ಕೊಲೆಯಾಗಿದ್ದು, ಪೊಲೀಸರು ಈಗ ಪತ್ನಿ ಚೈತ್ರಾ, ಆಕೆಯ ಗೆಳೆಯ ರವಿ ಪಾಟೀಲ್ ಅಲ್ಲದೇ ಕೃತ್ಯಕ್ಕೆ ಸಹಕಾರ ನೀಡಿದ ಸಿಕ್ಕಿಂದರ್ ಶಾಹಾ, ವೆಂಕಟ್ ಗಿರಿಮಾತೆ ಮತ್ತು ಆಕಾಶ್ ಅವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ನಾನು ನ್ಯಾಯದ ದಾರಿಯಲ್ಲಿದ್ದೇನೆ, ಸತ್ಯಕ್ಕೆ ಜಯ ಸಿಕ್ಕಿದೆ: ವಿಕ್ರಂ ಸಿಂಹ
Advertisement
ಏನಿದು ಪ್ರಕರಣ?
ನವೆಂಬರ್ 11 ರಂದು ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದ ಬಳಿ ಅಮಿತ್ ಶವ ಪತ್ತೆಯಾಗಿತ್ತು. ಇದನ್ನು ಅಪಘಾತ ಎಂಬಂತೆ ಬಿಂಬಿಸಲಾಗಿತ್ತು. ಆದರೆ ಮೃತದೇಹ ನೋಡಿದಾಗ ಪೊಲೀಸರಿಗೆ ಅನುಮಾನ ವ್ಯಕ್ತವಾಗಿತ್ತು.
Advertisement
ತನಿಖೆಗೆ ಇಳಿದ ಪೊಲೀಸರಿಗೆ ಶವ ಪತ್ತೆಯಾದ ಜಗದಲ್ಲಿ ಸಕ್ರಿಯವಾಗಿದ್ದ ಮೊಬೈಲ್ ನಂಬರ್ ಪತ್ತೆಹಚ್ಚಿದ್ದಾರೆ. ಬಳಿಕ ಸಿಕ್ಕಿಂದರ್ ಶಾಹಾ, ವೆಂಕಟ್ ಗಿರಿಮಾತೆ ಮತ್ತು ಆಕಾಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ರವಿ ಪಾಟೀಲ್ ಇವರಿಗೆ ಮುಂಗಡವಾಗಿ ಹಣ ನೀಡಿ ಕೃತ್ಯ ನಡೆಸಿ ವಿಚಾರಣೆಯನ್ನು ಬಾಯಿಬಿಟ್ಟಿದ್ದಾರೆ.
Advertisement
ನಂತರ ರವಿಪಾಟೀಲ್ ವಿಚಾರಣೆ ವೇಳೆ ಚೈತ್ರಾ ಪಾತ್ರ ಬಹಿರಂಗವಾಗಿದೆ. ವಿಚಾರಣೆ ವೇಳೆ ನಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಹತ್ಯೆ ಮಾಡಲಾಗಿದೆ ಎಂದು ಚೈತ್ರಾ ತಿಳಿಸಿದ್ದಾಳೆ.
ಪೊಲೀಸರು ಈಗ ಕೃತ್ಯಕ್ಕೆ ಬಳಸಿದ ರಾಡ್, ಮೊಬೈಲ್ ಹಾಗೂ ಕೊಲೆ ಮಾಡಲು ಸಹಚರರಿಗೆ ನೀಡಿದ ಮುಂಗಡ ಹಣವನ್ನು ಜಪ್ತಿ ಮಾಡಿದ್ದಾರೆ.