ಗದಗ: ಅನೈತಿಕ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ್ದ ಪತಿಯನ್ನು ಪ್ರಿಯಕರನ ಜೊತೆ ಸೇರಿ ಪತ್ನಿಯೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗಜೇಂದ್ರಗಡದಲ್ಲಿ ನಡೆದಿದೆ.
ಮಂಜುನಾಥ ವಾಲಿ ಕೊಲೆಯದ ಪತಿ. ಪತ್ನಿ ಶೋಭಾ ವಾಲಿ, ಪ್ರಿಯಕರ ಮಾಳೋತ್ತರ ಮತ್ತು ಆತನ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಮಂಜುನಾಥ ಅವರ ಕೊಲೆಯಾಗಿತ್ತು. ಈ ಕುರಿತು ಮಾಹಿತಿ ಪಡೆದ ಗಜೇಂದ್ರಗಡ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಘಟನೆಯ ಬಳಿಕ ಪತ್ನಿ ಶೋಭಾ ನಡವಳಿಕೆ ಬಗ್ಗೆ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಶೋಭಾ ಕಳೆದ ಕೆಲ ಸಮಯದಿಂದ ಮಾಳೋತ್ತರ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ಕುರಿತು ತಿಳಿದ ಪತಿ ಮಂಜುನಾಥ್ ಪತ್ನಿಯನ್ನು ಪ್ರಶ್ನೆ ಮಾಡಿ ಇದರಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದನು.
ಹೀಗಾಗಿ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡ ಬಂದ ಪತಿಯನ್ನು ಮುಗಿಸಲು ಸಂಚು ರೂಪಿಸಿದ್ದ ಶೋಭಾ, ಪ್ರಿಯಕರನಿಗೆ ಹಣದ ಆಮಿಷ ನೀಡಿ ಕೊಲೆ ಮಾಡಿದ್ದಳು. ಶೋಭಾ ಮಾತಿನಂತೆ ತನ್ನದೇ ಸ್ನೇಹಿತ ಗ್ಯಾಂಗ್ ಕಟ್ಟಿಕೊಂಡ ಪ್ರಿಯಕರ ಮಾಳೋತ್ತರ, ಮಂಜುನಾಥರನ್ನು ನವೆಂಬರ್ 25 ಕೊಲೆ ಮಾಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv