ಮಂಡ್ಯ: ಪ್ರಿಯಕರನ ಜೊತೆ ಸೇರಿ ಪತಿಯನ್ನು ಪತ್ನಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದಲ್ಲಿ ನಡೆದಿದೆ.
ಸತೀಶ್ ಕೊಲೆಯಾದ ಪತಿ. ಸತೀಶ್ ಮೇ 23 ರಂದು ಕಾಣೆಯಾಗಿದ್ದನು. ಈ ಬಗ್ಗೆ ಆತನ ಪತ್ನಿ ಪೊಲೀಸ್ ಠಾಣೆಗೆ ಬಂದು ಗಂಡ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದಳು.
Advertisement
Advertisement
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದರು. ಈ ವೇಳೆ ಪೊಲೀಸರಿಗೆ ಪತ್ನಿಯ ಮೇಲೆ ಅನುಮಾನ ಬಂದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಮಾಡಿದಾಗ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿರುವ ಕೃತ್ಯ ಬಯಲಾಗಿದೆ.
Advertisement
ಪತ್ನಿ ಹಾಗೂ ಆಕೆಯ ಪ್ರಿಯಕರ ಸತೀಶ್‍ನನ್ನು ಕೊಲೆ ಮಾಡಿದ ನಂತರ ಆತನ ಶವವನ್ನು ಗ್ರಾಮದ ಹೊರಗಡೆ ಹೂತು ಹಾಕಿದ್ದರು. ಈ ವಿಷಯ ತಿಳಿದ ಪೊಲೀಸರು ಇಂದು ಸತೀಶ್ ಶವವನ್ನು ಹೊರ ತೆಗೆದು ಪರಿಶೀಲನೆ ನಡೆಸುತ್ತಿದ್ದಾರೆ.
Advertisement
ಈ ಬಗ್ಗೆ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.