ಚಾಮರಾಜನಗರ: ಪತಿಯ ಅಕ್ರಮ ಸಂಬಂಧ (Illicit Relationship) ಪ್ರಶ್ನಿಸಿದ್ದಕ್ಕೆ ಪತ್ನಿ ಕೊಲೆಯಾದ ಘಟನೆ ಚಾಮರಾಜನಗರ (Chamarajanagar) ತಾಲೋಕು ಮೂಡ್ನಾಕೂಡು ಗ್ರಾಮದಲ್ಲಿ ನಡೆದಿದೆ.
ಎಂ.ಸಿ.ಸೌಮ್ಯ (27) ಕೊಲೆಯಾದ ಮಹಿಳೆ. ಏಳು ವರ್ಷಗಳ ಹಿಂದೆ ಸೌಮ್ಯಳನ್ನು ವಿವಾಹವಾಗಿದ್ದ ಮಹೇಶ್ ಚಂದ್ರಗುರು ಪರಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ತಿಳಿದ ಸೌಮ್ಯಾ, ಪತಿಯನ್ನು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ನೇಣು ಬಿಗಿದುಕೊಂಡು ವಿಲೇಜ್ ಅಕೌಂಟೆಂಟ್ ಆತ್ಮಹತ್ಯೆ
Advertisement
Advertisement
ಪತ್ನಿ ಪ್ರಶ್ನಿಸಿದ್ದಕ್ಕೆ ಸಿಟ್ಟುಗೊಂಡ ಮಹೇಶ್ ಚಂದ್ರಗುರು, ಸೌಮ್ಯಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಪತಿ ಮಹೇಶ್ ಚಂದ್ರಗುರುವನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ದಂಪತಿಗೆ 5 ವರ್ಷದ ಹೆಣ್ಣು ಮಗುವಿದೆ. ಇದೀಗ ಪ್ರಕರಣ ಸಂಬಂಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.