– ಪತಿಯ ಸೋದರನ ಜೊತೆ ಪತ್ನಿ ಸೆಕ್ಸ್
– ಗಂಡ ಊಟಕ್ಕೆ ಬಂದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ಳು
ಡಿಸ್ಪುರ್: ಮೈದುನನ ಜೊತೆ ಸೆಕ್ಸ್ ಮಾಡುತ್ತಿದ್ದಾಗ ಪತ್ನಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಳು. ಕೋಪಗೊಂಡ ಪತಿ, ಪತ್ನಿ ಮತ್ತು ಸಹೋದರ ಇಬ್ಬರನ್ನು ಕೊಲೆ ಮಾಡಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.
ಗುವಾಹಟಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಪತಿ ಗೌತಮ್ (ಹೆಸರು ಬದಲಾಯಿಸಲಾಗಿದೆ) ತನ್ನ ಪತ್ನಿ ಸೋನಾಕ್ಷಿ (ಹೆಸರು ಬದಲಾಯಿಸಲಾಗಿದೆ) ಮತ್ತು ಸೋದರನನ್ನು ಕೊಲೆ ಮಾಡಿದ್ದಾನೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Advertisement
ಏನಿದು ಘಟನೆ?
ಗೌತಮ್ ಮತ್ತು ಸೋನಾಕ್ಷಿ ಮದುವೆಯಾಗಿದ್ದು, ಗುವಾಹಟಿಯಲ್ಲಿ ವಾಸಿಸುತ್ತಿದ್ದರು. ದಂಪತಿಯ ಜೊತೆ ಗೌತಮ್ ಸಹೋದರ ಕೂಡ ಇದ್ದನು. ಈತ ಜಮೀನಿನ ಕೆಲಸದಲ್ಲಿ ಗೌತಮ್ಗೆ ಸಹಾಯ ಮಾಡುತ್ತಿದ್ದನು. ಆದರೆ ಸೋನಾಕ್ಷಿ ಮದುವೆಯಾದಗಿನಿಂದ ಪತಿಯ ಸಹೋದರನ ಜೊತೆ ಸಲುಗೆಯಿಂದ ಇದ್ದಳು. ಪತಿ ಗೌತಮ್ ಕೆಲಸಕ್ಕೆಂದು ಜಮೀನಿಗೆ ಹೋದಾಗ ಸೋನಾಕ್ಷಿ ಮತ್ತು ಮೈದುನ ಇಬ್ಬರು ಮನೆಯಲ್ಲಿರುತ್ತಿದ್ದರು. ಆಗ ಸೋನಾಕ್ಷಿ ಮೈದುನ ಜೊತೆ ಸೆಕ್ಸ್ ಮಾಡಲು ಮುಂದಾಗಿದ್ದಾಳೆ. ಆದರೆ ಮೈದುನ ಮೊದಲಿಗೆ ಭಯಗೊಂಡು ಸುಮ್ಮನಿದ್ದನು. ಆದರೆ ಸೋನಾಕ್ಷಿ ಒತ್ತಾಯ ಮಾಡಿದಾಗ ಇಬ್ಬರೂ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಇದೇ ರೀತಿ ದಿನ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಲೈಂಗಿಕ ಸಂಬಂಧ ಹೊಂದುತ್ತಿದ್ದರು. ಒಂದು ದಿನ ಗೌತಮ್ ಮುಂಜಾನೆಯೇ ಜಮೀನಿಗೆ ಹೋಗಿದ್ದನು. ಮನೆಯಲ್ಲಿ ಸೋನಾಕ್ಷಿ ಮತ್ತು ಆತನ ಸಹೋದರ ಇದ್ದನು. ಮನೆಯಲ್ಲಿ ಯಾರೂ ಇಲ್ಲದ ಕಾರಣ ಬೆಡ್ರೂಮಿನಲ್ಲಿ ಇಬ್ಬರು ಲೈಂಗಿಕ ಸಂಬಂಧ ಹೊಂದಿದ್ದರು.
Advertisement
ಇತ್ತ ಗೌತಮ್ ಮಧ್ಯಾಹ್ನ ಊಟ ಮಾಡಲು ಮನೆಗೆ ಬಂದಿದ್ದಾನೆ. ಮನೆಯ ಬಾಗಿಲು ತೆರೆದಿತ್ತು. ಹೀಗಾಗಿ ಆತ ನೇರವಾಗಿ ಮನೆಗೆ ಬಂದು ಬೆಡ್ರೂಮಿಗೆ ಹೋಗಿದ್ದಾನೆ. ಅಲ್ಲಿ ತನ್ನ ಪತ್ನಿ ಮತ್ತು ಸಹೋದರ ನಗ್ನವಾಗಿ ಸೆಕ್ಸ್ ನಲ್ಲಿ ತೊಡಗಿರುವುದನ್ನು ನೋಡಿದ್ದಾನೆ. ಇಬ್ಬರೂ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ. ಇದರಿಂದ ಕೋಪಗೊಂಡ ಗೌತಮ್ ಅಲ್ಲಿದ್ದ ಚಾಕು ತೆಗೆದುಕೊಂಡು ಇಬ್ಬರ ಗಂಟಲು ಸೀಳಿದ್ದಾನೆ ಎಂದು ಇನ್ಸ್ ಪೆಕ್ಟರ್ ಹೇಳಿದ್ದಾರೆ.
ಗಲಾಟೆಯ ಶಬ್ದ ಕೇಳಿ ನೆರೆಹೊರೆಯವರು ಓಡಿ ಬಂದು ನೋಡಿದ್ದಾರೆ. ಆಗ ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ್ದು, ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.