Districts

ಅನೈತಿಕ ಸಂಬಂಧ ಹೊಂದಿದ್ದ ಪತ್ನಿಯನ್ನು ಕ್ರೂರವಾಗಿ ಹತ್ಯೆಗೈದ ಪತಿ, ಸಹೋದರ

Published

on

Share this

ಹಾವೇರಿ: ಪತ್ನಿಯ ಅನೈತಿಕ ಸಂಬಂಧದಿಂದ ರೋಸಿ ಹೋಗಿದ್ದ ಪತಿ ಆಕೆಯ ತಮ್ಮನೊಂದಿಗೆ ಸೇರಿ ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಹಾವೇರಿ ತಾಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ನೂತನ ಸಚಿವ ಸಂಪುಟ ರಚನೆ ಕಸರತ್ತು- ಐವರು ಹಳೆ ಸಚಿವರಿಗೆ ಕೊಕ್

ಶಕುಂತಲಾ ಉಪ್ಪಾರ್(32) ಮೃತದುರ್ದೈವಿ ಎಂದು ಗುರುತಿಸಲಾಗಿದೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ ಗ್ರಾಮದವರಾಗಿದ್ದಾರೆ. ಕಳೆದ 15 ವರ್ಷಗಳ ಹಿಂದೆ ಶಕುಂತಲಾರನ್ನು ಹಾವೇರಿ ತಾಲೂಕಿನ ಕೆರೆಕೊಪ್ಪ ಗ್ರಾಮದ ಹನುಮಂತಪ್ಪರಿಗೆ ಮದುವೆ ಮಾಡಿಕೊಡಲಾಗಿತ್ತು. ಶಕುಂತಲಾ ಮತ್ತು ಹನುಮಂತಪ್ಪ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಮದುವೆ ನಂತರದ ಕೆಲವು ವರ್ಷಗಳಿಂದ ಶಕುಂತಲಾ ಪರಪುರುಷರ ಸಂಗ ಬೆಳೆಸಿದ್ದು, ಕೆಲವು ವರ್ಷಗಳ ಹಿಂದೆ ಪರಪುರುಷನ ಜೊತೆ ಮನೆಬಿಟ್ಟು ಹೋಗಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಲಾರಿ ಪಲ್ಟಿ- ಡ್ರೈವರ್ ಗ್ರೇಟ್ ಎಸ್ಕೇಪ್

ಆಗ ಶಕುಂತಲಾರ ತಂದೆ, ತಾಯಿ ಪೊಲೀಸರ ನೆರವಿನಿಂದ ಆಕೆಯನ್ನು ಪತ್ತೆ ಮಾಡಿ ಬುದ್ಧಿವಾದ ಹೇಳಿ ಪತಿಯ ಮನೆ ಸೇರಿಸಿದರು. ಆದರೆ ಶಕುಂತಲಾ ಮಾತ್ರ ಪರಪುರುಷರ ಸಂಗವನ್ನ ಬಿಡಲೇ ಇಲ್ಲ. ಹೀಗಾಗಿ ಶಕುಂತಲಾ ಪತಿ ಹನುಮಂತಪ್ಪ ಹಾಗೂ ಆಕೆಯ ತಮ್ಮ ಬಸವರಾಜ್ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾರೆ. ಇದೀಗ ಇಬ್ಬರು ಆರೋಪಿಗಳನ್ನು ಗುತ್ತಲ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಹಾವೇರಿ ಎಸ್‍ಪಿ ಹನುಮಂತರಾಯ ಹಾಗೂ ಬೆರಳಚ್ಚು ತಜ್ಞರು ಆಗಮಿನಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಪ್ರಕರಣ ಗುತ್ತಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

Click to comment

Leave a Reply

Your email address will not be published. Required fields are marked *

Advertisement
Advertisement