ಮುಂಬೈ: ಮಹಿಳೆಯೊಬ್ಬರು ತಮ್ಮ ಪತಿಯ ವಾಟ್ಸಪ್ ಖಾತೆಯನ್ನು ಹ್ಯಾಕ್ (WhatsApp Hack) ಮಾಡಿದ್ದು, ಪರ ಸ್ತ್ರೀಯರೊಂದಿಗೆ ಗಂಡನ ರಾಸಲೀಲೆಗಳನ್ನು ಕಂಡು ಶಾಕ್ ಆಗಿರುವ ಘಟನೆ ಮಹಾರಾಷ್ಟ್ರದ (Maharashtra) ನಾಗ್ಪುರದಲ್ಲಿ (Nagpur) ನಡೆದಿದೆ.
33 ವರ್ಷದ ಪತಿ ಅಬ್ದುಲ್ ಶರೀಖ್ ಖುರೇಷಿಯ ರಾಸಲೀಲೆಗಳನ್ನು ನೋಡಿ ಶಾಕ್ ಆದ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಆತ ಈಗ ಅರೆಸ್ಟ್ ಆಗಿದ್ದಾನೆ. ಅಶ್ಲೀಲ ಚಟುವಟಿಕೆಗಳಿಗೆ ಗಂಡನ ನಿರಂತರ ಬೇಡಿಕೆಗಳಿಂದ ಬೇಸತ್ತ ಪತ್ನಿ ಆತನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಆದರೆ ಸುಪ್ರೀಂ ಕೋರ್ಟ್ನ ಗೈಡ್‌ಲೈನ್ಸ್ ಪ್ರಕಾರ ಆತನನ್ನು ಬಂಧಿಸಲಾಗಲಿಲ್ಲ. ಈ ಹಿನ್ನೆಲೆ ದಾಖಲೆಗಳಿಗಾಗಿ ಪತ್ನಿ ಆತನ ವಾಟ್ಸಪ್ ಹ್ಯಾಕ್ ಮಾಡಿದ್ದಾಳೆ. ಆತನ ಚಾಟ್ ಹಿಸ್ಟರಿಯನ್ನು ಪರಿಶೀಲಿಸಿದ ವೇಳೆ ಪತಿಯ ಕಾಮಪುರಾಣಗಳು ಒಂದೊಂದಾಗಿ ಹೊರಬಿದ್ದಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್ – ಸುಪ್ರೀಂನಲ್ಲಿ ನಾಳೆ ದರ್ಶನ್ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ
ಅಬ್ದುಲ್ ಶಾರಿಕ್ ಖುರೇಷಿ ತನಗೆ ಮದುವೆಯಾಗಿ 3 ವರ್ಷದ ಮಗಳಿರುವ ವಿಷಯವನ್ನು ಮರೆಮಾಚಿ, ಅನೇಕ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಡೇಟಿಂಗ್ ಮಾಡುತ್ತಿದ್ದ. ಅಲ್ಲದೇ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಸಾಧಿಸಿ, ಖಾಸಗಿ ಕ್ಷಣಗಳ ವೀಡಿಯೋ ಚಿತ್ರೀಕರಣ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಕೂಡ ಮಾಡುತ್ತಿದ್ದ. ಇದನ್ನೂ ಓದಿ: ಗ್ಯಾರಂಟಿ ಸರ್ಕಾರದಿಂದ ಶಾಕ್ – ಡೀಸೆಲ್ ದರ 2 ರೂ. ಏರಿಕೆ
ಕಳೆದ ವರ್ಷ ‘ಮಹಾಪ್ರಸಾದ್’ ಕಾರ್ಯಕ್ರಮದಲ್ಲಿ 19 ವರ್ಷದ ಹುಡುಗಿಯನ್ನು ಭೇಟಿಯಾದ ಅಬ್ದುಲ್ ಶಾರಿಕ್ ತನ್ನನ್ನು ‘ಸಾಹಿಲ್ ಶರ್ಮಾ’ ಎಂದು ಗುರುತಿಸಿಕೊಳ್ಳುವ ಮೂಲಕ ಆಕೆಯ ಸ್ನೇಹ ಬೆಳೆಸಿದ್ದ. ಅಲ್ಲದೇ ತಾನೊಬ್ಬ ಅವಿವಾಹಿತ ಎಂದು ಬಿಂಬಿಸಿ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಪದೇ ಪದೇ ಹೋಟೆಲ್ ರೂಂಗಳಿಗೆ ಕರೆಸಿಕೊಂಡು ದೈಹಿಕ ಸಂಪರ್ಕ ಕೂಡ ಸಾಧಿಸಿದ್ದ. ಅಲ್ಲದೇ ಆಕೆಯ ನಗ್ನ ಫೋಟೋ ಹಾಗೂ ವೀಡಿಯೋಗಳನ್ನು ಲೀಕ್ ಮಾಡುವುದಾಗಿ ಬೆದರಿಸಿ ಆಕೆಯ ತಾಯಿ ಕೊಡಿಸಿದ್ದ ಚಿನ್ನದ ಉಂಗುರ ಮಾರುವಂತೆ ಒತ್ತಾಯಿಸಿ ಆಕೆಯಿಂದ 30,000 ರೂ. ಹಣವನ್ನು ಕೂಡ ಪಡೆದಿದ್ದ. ಇದನ್ನೂ ಓದಿ: ಕಲಬುರಗಿ ನಗರವನ್ನು ಸ್ಮಾರ್ಟ್ ಸಿಟಿಯಾಗಿಸಲು ಶಾಸಕರು, ಅಧಿಕಾರಿಗಳೊಂದಿಗೆ ಪ್ರಿಯಾಂಕ್ ಖರ್ಗೆ ಚರ್ಚೆ
ಶೋಷಣೆಗೊಳಗಾದ 19 ವರ್ಷದ ಹುಡುಗಿಯನ್ನು ಭೇಟಿ ಮಾಡಿದ ಪತ್ನಿ ಆಕೆಯ ಮನವೊಲಿಸಿ ದೂರು ನೀಡುವಂತೆ ಒತ್ತಾಯಿಸಿದ್ದಾಳೆ. ಹುಡುಗಿ ನೀಡಿದ ದೂರಿನ ಆಧಾರದ ಮೇಲೆ, ಅಬ್ದುಲ್ ಶಾರಿಕ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಮತ್ತು ಆತನನ್ನು ಬಂಧಿಸಲಾಗಿದೆ ಎಂದು ಪಚ್‌ಪಾವೊಲಿ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಬಾಬುರಾವ್ ರಾವುತ್ ತಿಳಿಸಿದ್ದಾರೆ. ಇದನ್ನೂ ಓದಿ: ಡೆಲ್ಲಿಗೆ ಸಿಎಂ, ಡಿಸಿಎಂ: ಮಹತ್ವದ 2 ಕೇಸ್ ಬಗ್ಗೆ ರಿಪೋರ್ಟ್ ಸಲ್ಲಿಕೆ ಸಾಧ್ಯತೆ