ಕೋಲಾರ: ಪತ್ನಿಯೊಬ್ಬಳು ತನ್ನ ಪತಿಯ ಕೊಲೆಗೆ 5 ಲಕ್ಷ ರೂ. ಸುಪಾರಿ ನೀಡಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಕೋಲಾರ ಪೊಲೀಸರು ಯಶ್ವಸಿಯಾಗಿದ್ದಾರೆ.
ಭಾಗ್ಯಮ್ಮ ಎಂಬ ಮಹಿಳೆ 2016ರ ಜನವರಿ 13ರಂದು ತನ್ನ ಪತಿ ನಾರಾಯಣ ಅವರನ್ನು ಕೊಲೆ ಮಾಡುವುದಕ್ಕಾಗಿ 5 ಲಕ್ಷ ರೂ. ಸುಪಾರಿ ನೀಡಿದ್ದಳು. ಕೊಲೆಯ ನಂತರ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಎಲ್ಲರನ್ನೂ ನಂಬಿಸಿದ್ದಳು.
ಕೊಲೆಯಾದ ನಾರಾಯಣ ಮೂಲತಃ ಆಂಧ್ರಪ್ರದೇಶ ರಾಜ್ಯದ ನಿವಾಸಿ. 15 ವರ್ಷಗಳ ಹಿಂದೆ ನಾರಾಯಣಸ್ವಾಮಿ ಮುಳುಬಾಗಿಲು ಪಟ್ಟಣಕ್ಕೆ ಸಪ್ಲೈಯರ್ ಕೆಲಸಕ್ಕಾಗಿ ಆಗಮಿಸಿದ್ದರು. ನಂತರ ತಾವೇ ಒಂದು `ಬಾಯಿಕೊಂಡ ಗಂಗಮ್ಮ’ ಎಂಬ ಕಬಾಬ್ ಸೆಂಟರ್ ತೆರೆದು ಯಶ್ವಸಿಯಾಗಿ, ಸಾಕಷ್ಟು ಆಸ್ತಿ ಸಂಪಾದನೆ ಮಾಡಿಕೊಂಡಿದ್ದರು. ಆದರೆ ನಾರಾಯಣಸ್ವಾಮಿ ತನ್ನ ಪತ್ನಿ ಭಾಗ್ಯಮ್ಮಳ ಅಕ್ಕ ಮತ್ತು ಆಕೆಯ ಮಗಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು ಎನ್ನಲಾಗಿದೆ.
ಗಂಡನ ಅಕ್ರಮ ಸಂಬಂಧದ ಬೇಸತ್ತ ಭಾಗ್ಯಮ್ಮ ತನಗೆ ಪರಿಚಯವಿದ್ದ ಬಾಲಾಜಿ ಸಿಂಗ್ ಎಂಬವರ ಮೂಲಕ ಜಮೀರ್ ಪಾಷಾ ಹಾಗು ವಾಸಿಂ ಪಾಷಾರನ್ನು ಸಂಪರ್ಕಿಸಿದ್ದಳು. ಇವರಿಬ್ಬರಿಗೂ ತನ್ನ ಪತಿಯನ್ನು ಕೊಲ್ಲಲು ಬರೋಬ್ಬರಿ 5 ಲಕ್ಷ ರೂ.ಗೆ ಸುಫಾರಿ ನೀಡಿದ್ದಳು.
ಬೆಳಕಿಗೆ ಬಂದಿದ್ದು ಹೇಗೆ?: ಆರೋಪಿಗಳಾದ ಜಮೀರ್ ಪಾಷಾ ಮತ್ತು ವಾಸಿಂ ಪಾಷಾ ದರೋಡೆ ಪ್ರಕರಣದಲ್ಲಿ ಬಂಧಿಯಾಗಿದ್ದರು. ಪೊಲೀಸರ ವಿಚಾರಣೆ ವೇಳೆ ನಾರಾಯಣಸ್ವಾಮಿಯ ಕೊಲೆಯನ್ನು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾಗ್ಯಮ್ಮಳನ್ನು ಪೊಲೀಸರು ವಿಚಾರಿಸಿದಾಗ ಆಕೆಯು ಸಹ ತಪ್ಪೊಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ: ಶೀಲ ಶಂಕಿಸಿದ ಗಂಡನನ್ನೇ ಕೊಂದಳು ಪತ್ನಿ!
ಗಂಡನನ್ನು ಕೊಲ್ಲಲು ಜಮೀರ್ ಪಾಷಾ ಹಾಗು ವಸೀಂ ಪಾಷಾ ಎಂಬವರಿಗೆ ಭಾಗ್ಯಮ್ಮ ಸುಪಾರಿ ನೀಡಿದ್ದಳು ಎಂಬುದು ಈಗ ಬಯಲಾಗಿದ್ದು, ನ್ಯಾಯಾಲಯದ ಆದೇಶದಂತೆ ಇಂದು ಉಪ ವಿಭಾಗಾಧಿಕಾರಿ ಮಂಜುನಾಥ ನೇತೃತ್ವದಲ್ಲಿ ಮುಳಬಾಗಿಲು ತಾಲೂಕು ಹೊಸಹಳ್ಳಿ ರಸ್ತೆಯಲ್ಲಿರುವ ಫಾರ್ಮ್ ಹೌಸ್ ಆವರಣದಲ್ಲಿ ಮರು ಶವಪರೀಕ್ಷೆ ನಡೆಸಲಾಯಿತು.
ಇದನ್ನೂ ಓದಿ: ಗಂಡನ ಕಾಮದಾಟ ಬೇಸತ್ತು ಸುಪಾರಿ ಕೊಟ್ಟು ಗಂಡನನ್ನೇ ಕೊಲ್ಲಿಸಿದ್ಳು!