ಬೆಂಗಳೂರು: ನಿನ್ನ ಪತ್ನಿಯನ್ನು ನನ್ನ ಜೊತೆ ಇಟ್ಟುಕೊಳ್ಳುತ್ತೇನೆ ಎಂದು ಫೋನಿನಲ್ಲಿ ಧಮ್ಕಿ ಹಾಕಿದ್ದ ಗೆಳೆಯನಿಗೆ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಆರೋಪಿ ಹಾಗೂ ಆತನ ಸಹಚರನನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.
ಯೋಗೇಶ್ ಕುಮಾರ್ ಹಾಗೂ ಪ್ರಸನ್ನ ಬಂಧಿತ ಆರೋಪಿಗಳು. ಆರೋಪಿಗಳಾದ ಯೋಗೇಶ್ ಹಾಗೂ ಪ್ರಸನ್ನ ಕಳೆದ ವರ್ಷ ಡಿಸೆಂಬರ್ 14ರಂದು ಮಂಜುನಾಥ್ ನಗರದ ಬಾಲಾಜಿ ಬಾರ್ ಬಳಿ ತಮ್ಮ ಸ್ನೇಹಿತ ಸದಾನಂದನನ್ನು ಕೊಲೆ ಮಾಡಿ ಪರಾರಿ ಆಗಿದ್ದರು.
ಬಳಿಕ ಬಸವೇಶ್ವರ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆಗೆ ಒಳಪಡಿಸಿದರು. ಈ ವೇಳೆ ಆರೋಪಿ ಯೋಗೇಶ್ ನಾನು ಬಾಂಬೆಯಲ್ಲಿದ್ದಾಗ ಕೊಲೆ ಮಾಡುವುದ್ದಕ್ಕೆ ಸದಾನಂದ ಸುಪಾರಿ ಕೊಟ್ಟಿದ್ದನು. ಅಲ್ಲದೇ ನೀನು ಕೊಲೆಯಾದ ಬಳಿಕ ನಿನ್ನ ಪತ್ನಿಯನ್ನು ನನ್ನ ಜೊತೆ ಇಟ್ಟುಕೊಳ್ಳುತ್ತೇನೆ ಎಂದು ಫೋನ್ ಧಮ್ಕಿ ಹಾಕುತ್ತಿದ್ದನು. ಆ ಕಾರಣಕ್ಕೆ ನನ್ನ ಸ್ನೇಹಿತ ಪ್ರಸನ್ನನ ಸಹಾಯ ಪಡೆದು ಸದಾನಂದನನ್ನು ಕೊಲೆ ಮಾಡಿದ್ದೇನೆ ಎಂದು ಆರೋಪಿ ಯೋಗೇಶ್ ತನಿಖೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.