ಎರಡನೇ ಬಾರಿ ಗೆಳೆಯನೊಂದಿಗೆ ಪತ್ನಿ ಜೂಟ್-ಮಗನಿಗೆ ವಿಷವುಣಿಸಿ ಪತಿ ಆತ್ಮಹತ್ಯೆ

Public TV
2 Min Read
Still 01

ಚಂಡೀಗಢ: ಮಾಜಿ ಪ್ರಿಯಕರನೊಂದಿಗೆ ಪತ್ನಿ ಎಸ್ಕೇಪ್ ಆಗಿದ್ದಕ್ಕೆ ಮನನೊಂದ ಪತಿ ಆರು ವರ್ಷದ ಮಗನಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪಂಚಾಬ್ ರಾಜ್ಯದ ನೂರಪುರಬೇದಿಯಲ್ಲಿ ಈ ಘಟನೆ ನಡೆದಿದೆ.

32 ವರ್ಷದ ಹರಿಜಿಂದರ್ ಸಿಂಗ್ ಆತ್ಮಹತ್ಯೆಗೆ ಶರಣಾದ ಪತಿ. ಪತ್ನಿ ಜಸ್ವೀರ್ ಕೌರ್ ಅದೇ ಗ್ರಾಮದ ಸುಖ್ವೀರ್ ಸಿಂಗ್ ಜೊತೆ ಓಡಿ ಹೋಗಿದ್ದರಿಂದ ಅವಮಾನಕ್ಕೊಳಗಾದ ಪತಿ ತನ್ನೊಂದಿಗಿದ್ದ 6 ವರ್ಷದ ಹರಕೀರತ್ ನಿಗೆ ವಿಷವುಣಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ತಿಂಗಳ ಹಿಂದೆಯೂ ಜಸ್ವೀರ್ ಕೌರ್ ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು. ಕೆಲ ದಿನಗಳ ಬಳಿಕ ಗ್ರಾಮಕ್ಕೆ ಹಿಂದಿರುಗಿದ್ದ ಜಸ್ವೀರ್ ನನ್ನ ಕ್ಷಮಿಸಿದ್ದ ಹರಿಜಿಂದರ್ ಸಿಂಗ್ ಮನೆಯಲ್ಲಿ ಇರಿಸಿಕೊಂಡಿದ್ದರು. ಆದ್ರೆ ತನ್ನ ಚಾಳಿ ಬಿಡದ ಜಸ್ವೀರ್ ಇತ್ತೀಚೆಗೆ ಅದೇ ಗೆಳೆಯನೊಂದಿಗೆ ಜೂಟ್ ಆಗಿದ್ದಳು.

couple

ಚಾಲಕನಾಗಿದ್ದ ಹರಿಜಿಂದರ್ ಕೆಲಸದ ಹಿನ್ನೆಲೆಯಲ್ಲಿ ಮನೆಯಿಂದ ಹೊರಗೆ ಇರುತ್ತಿದ್ದರು. ಜಸ್ವೀರ್ ಪ್ರತಿನಿತ್ಯ ಸುಖ್ವೀರ್ ಸಿಂಗ್ ಮನೆಗೆ ಹಾಲು ತರಲು ಹೋಗುತ್ತಿದ್ದಳು. ಹೀಗೆ ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ ಅನೈತಿಕ ಸಂಬಂಧವಾಗಿ ಬದಲಾಗಿತ್ತು. ಎರಡು ಮಕ್ಕಳ ತಾಯಿಯಾಗಿರುವ ಜಸ್ವೀರ್ ಕೌರ್ ತಮ್ಮ ಮೊದಲ 10 ವರ್ಷದ ಮಗನನ್ನು ಕರೆದುಕೊಂಡು ಸುಖ್ವೀರ್ ಸಿಂಗ್ ಜೊತೆ ಎಸ್ಕೇಪ್ ಆಗಿದ್ದಳು. ಗ್ರಾಮಸ್ಥರು ಮತ್ತು ಕುಟುಂಬಸ್ಥರು ಇಬ್ಬರಿಗಾಗಿ ಶೋಧ ನಡೆಸಿದ್ದರೂ ಪತ್ತೆಯಾಗಿರಲಿಲ್ಲ.

ಮೂರು ತಿಂಗಳ ಬಳಿಕ ಸುಖ್ವೀರ್ ಸಿಂಗ್ ಮತ್ತು ಜಸ್ವೀರ್ ಕೌರ್ ಗ್ರಾಮಕ್ಕೆ ವಾಪಾಸ್ ಆಗಿದ್ದರು. ಗ್ರಾಮದ ಹಿರಿಯರ ಮುಂದೆ ತಪ್ಪೊಪ್ಪಿಕೊಂಡು ಇಬ್ಬರು ಪ್ರತ್ಯೇಕವಾಗಿ ಇರಲು ಒಪ್ಪಿದ್ದರು. ಇತ್ತ ಹರಿಜಿಂದರ್ ಸಿಂಗ್ ಸಹ ಕುಟುಂಬಸ್ಥರ ಸಲಹೆಯ ಮೇರೆಗೆ ಪತ್ನಿಯನ್ನು ಕ್ಷಮಿಸಿ ಮನೆಗೆ ಕರೆದುಕೊಂಡು ಹೋಗಿದ್ದರು. ಮರುದಿನವೇ ಪತಿ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಜಸ್ವೀರ್ ಆರೋಪಿಸಿ ಪತಿಯ ಮನೆಯಿಂದ ಹೊರ ಬಂದಿದ್ದಳು.

Marriage

ಕೆಲವು ದಿನಗಳ ಹಿಂದೆ ಮತ್ತೆ ಜಸ್ವೀರ್ ತನ್ನ ಮೊದಲ ಮಗನೊಂದಿಗೆ ಇದೇ ಸುಖ್ವೀರ್ ಸಿಂಗ್ ಜೊತೆ ಎಸ್ಕೇಪ್ ಆಗಿದ್ದಳು. ಈ ಸಂಬಂಧ ಹರಿಜಿಂದರ್ ಸಿಂಗ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಜಸ್ವೀರ್ ಕೌರ್, ಸುಖ್ವೀರ್ ಸಿಂಗ್, ಮಖನ್ ಸಿಂಗ್, ಮಹಿಂದರ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ಜೋಡಿಯ ಹುಡುಕಾಟದಲ್ಲಿದ್ದಾರೆ. ಪೊಲೀಸರ ಪ್ರಕಾರ ಹರಿಜಿಂದರ್ ಸಿಂಗ್ ಮತ್ತು ಜಸ್ವೀರ್ ಕೌರ್ ವಿಚ್ಛೇಧನ ಪಡೆದುಕೊಂಡಿದ್ದರು ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *