ಮೈಸೂರು: ಕದ್ದುಮುಚ್ಚಿ ಎರಡನೇ ಮದ್ವೆ ಆಗೋಕೆ ಹಸೆಮಣೆ ಏರಿದ್ದ ಗಂಡನನ್ನು ಮೊದಲ ಹೆಂಡ್ತಿಯೇ ಮಂಟಪದಿಂದಲೇ ಎಳೆದು ತಂದಿದ್ದಾರೆ.
ಮೈಸೂರಿನ ಯೋಗಾ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯಲ್ಲಿರುವ 40 ವರ್ಷದ ಹೆಡ್ ಕಾನ್ಸ್ ಸ್ಟೇಬಲ್ ರಾಜಾರಿಗೆ ಸವಿತಾ ಎಂಬವರೊಂದಿಗೆ ಮದುವೆ ಆಗಿ 18 ವರ್ಷ ಆಗಿದ್ದು, ಇಬ್ಬರು ಮಕ್ಕಳೂ ಇದ್ದಾರೆ. ರಾಜಾ ಪೊಲೀಸ್ ಕೆಲಸದೊಂದಿಗೆ ಬಡ್ಡಿ ವಹಿವಾಟು ಕೂಡ ನಡೆಸುತ್ತಿದ್ದಾನೆ ಎಂದು ಹೇಳಲಾಗಿದೆ.
ಇಷ್ಟಾದರೂ ಚಪಲ ಬಿಡದ ಹುಣಸೂರು ತಾಲೂಕಿನ ಹೊಸಹಳ್ಳಿಯ ಚನ್ನಿಗರಾಯ ಫೇಸ್‍ಬುಕ್‍ನಲ್ಲಿ ಪರಿಚಯವಾದ ಮಹಿಳೆಯೊಂದಿಗೆ ಮದ್ವೆಗೆ ಮುಂದಾಗಿದ್ದನು. ನನಗೆ ಗೊತ್ತಾಗದಂತೆ ಎಲ್‍ಐಸಿ ಬಾಂಡ್‍ಗೆ ಅಂತ ಹೇಳಿ ಡೈವೋರ್ಸ್ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾನೆ ಅಂತ ಸವಿತಾ ಆರೋಪಿಸಿದ್ದಾರೆ.