Connect with us

ಸಾವಿನಲ್ಲೂ ಒಂದಾದ ದಂಪತಿ- ಪತ್ನಿ ತೊಡೆಯ ಮೇಲೆ ಮಲಗಿದ್ದಾಗಲೇ ಪ್ರಾಣ ಬಿಟ್ಟ ಪತಿ!

ಸಾವಿನಲ್ಲೂ ಒಂದಾದ ದಂಪತಿ- ಪತ್ನಿ ತೊಡೆಯ ಮೇಲೆ ಮಲಗಿದ್ದಾಗಲೇ ಪ್ರಾಣ ಬಿಟ್ಟ ಪತಿ!

ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕೊಮಾರನಹಳ್ಳಿ ತಾಂಡಾದ ದಂಪತಿ ಸಾವಿನಲ್ಲೂ ಒಂದಾದ ಘಟನೆ ನಡೆದಿದೆ.

65 ವರ್ಷದ ಚಂದ್ರನಾಯ್ಕ ಹಾಗೂ 60 ವರ್ಷದ ರುಕ್ಮಿಣಿಬಾಯಿ ಸಾವಿನಲ್ಲೂ ಒಂದಾದ ದಂಪತಿ. ಚಂದ್ರನಾಯ್ಕ ಇಂದು ಸಂಜೆ ಪತ್ನಿಯ ತೊಡೆಯ ಮೇಲೆ ಮಲಗಿದ್ದಾಗಲೇ ಪ್ರಾಣ ಬಿಟ್ಟಿದ್ದಾರೆ. ನಂತರ ಕೆಲವೇ ಕ್ಷಣಗಳಲ್ಲಿ ಪತ್ನಿ ರುಕ್ಮಿಣಿಬಾಯಿಯೂ ಸಾವನ್ನಪ್ಪಿದ್ದಾರೆ.

ದಂಪತಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಒಂದೆಡೆ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ರೆ, ಊರಿನ ಜನರು ಮೃತ ದಂಪತಿ ನೋಡಿ ಎಂತಾ ಸಾವೂ. ಜೊತೆ ಜೊತೆ ಬಾಳಿ ಸಾವಿನಲ್ಲೂ ಕೂಡಾ ಒಂದಾದ್ರೂ ಅಂತಿದ್ದಾರೆ.

Advertisement
Advertisement