`ಮನೆ ಒಳಗೆ ಬಿಟ್ಟುಕೊಳ್ತಿಲ್ಲ ಪತ್ನಿ’..ಪೊಲೀಸರ ಮೊರೆ ಹೋದ ಜಯಂ ರವಿ

Public TV
1 Min Read
jayam ravi 2

ತಮಿಳು ನಟ ಜಯಂ ರವಿ (Jayam Ravi) ಪತ್ನಿ ಆರತಿ ಜೊತೆಗಿನ ವಿವಾಹ ವಿಚ್ಛೇದನ (Divorce) ಘೋಷಣೆ ಬೆನ್ನಲ್ಲೇ ಸಂಸಾರ ಗಲಾಟೆ ಬೀದಿಗೆ ಬಂದಿದೆ. ಪತ್ನಿ ಆರತಿ ಜೊತೆ 15 ವರ್ಷಗಳ ದಾಂಪತ್ಯ ಜೀವನ ಅಂತ್ಯಗೊಳಿಸಿದ್ದಾಗಿ ಜಯಂ ರವಿ ಘೋಷಿಸಿದ್ದರು. ಬಳಿಕ ಆರತಿ ಕೂಡ ಸೋಶಿಯಲ್ ಮೀಡಿಯಾದಲ್ಲೇ ಪೋಸ್ಟ್ ಮಾಡಿ ಜಯಂ ರವಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾಗಿ ಹೇಳಿ ಪತಿಯ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಜಯಂ ರವಿ ತಮ್ಮ ಪತ್ನಿ ವಿರುದ್ಧವೇ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

jayam ravi 3

ಚೆನೈನಲ್ಲಿ (Chennai) ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಿದ್ದ ಜಯಂರವಿ ಸಂಸಾರ ತಾಪತ್ರಯ ಈಗ ಮುರಾಬಟ್ಟೆಯಾಗಿದೆ. ಕಾರಣ ಪತಿ ವಿಚ್ಛೇದನ ಘೋಷಿಸಿದ ಬಳಿಕ ಪತ್ನಿ ಆರತಿ ಪತಿಯನ್ನ ಮನೆಯೊಳಗೆ ಬಿಟ್ಟುಕೊಳ್ಳುತ್ತಿಲ್ಲವಂತೆ, ಕಾರು, ಬೈಕ್ ಹಾಗೂ ಬಟ್ಟೆಗಳು ಜೊತೆಗೆ ಕೆಲವು ಬೆಲೆ ಬಾಳುವ ವಸ್ತುಗಳು ಮನೆಯಲ್ಲೇ ಇರುವ ಕಾರಣ ಮನೆಯೊಳಗೆ ಬರಲು ಜಯಂ ರವಿ ಯತ್ನಿಸಿದ್ದಾರೆ. ಆದರೆ ಪತಿ ನಿರ್ಧಾರದಿಂದ ಅಸಮಾಧಾನಗೊಂಡಿದ್ದ ಆರತಿ ಪತಿಗೆ ಮನೆಗೆ ಬರಲು ಅನುಮತಿ ನೀಡಲಿಲ್ಲ. ಈ ಕಾರಣಕ್ಕೆ ಜಯಂ ರವಿ ನಿವಾಸವಿರುವ ಜಾಗದ ವ್ಯಾಪ್ತಿಗೆ ಬರುವ ಹತ್ತಿರದ ಪೊಲೀಸ್ ಠಾಣೆಯಲ್ಲಿ ಪತ್ನಿ ವಿರುದ್ಧ ದೂರು ದಾಖಲಿಸಿ ಮನೆಯೊಳಗೆ ಪ್ರವೇಶ ಪಡೆಯಲು ಅನುಮತಿ ಕೋರಿದ್ದಾರೆ. ನಾಲ್ಕು ಗೋಡೆ ಮಧ್ಯೆ ಇದ್ದ ಜಗಳ ಈಗ ಜಗಜ್ಜಾಹೀರಾಗಿದೆ.ಇದನ್ನೂ ಓದಿ: ರಂಗೀಲಾ ಬೆಡಗಿ ಊರ್ಮಿಳಾ ವಿಚ್ಛೇದನ !

Jayam Ravi 1

ಓರ್ವ ಸಿಂಗರ್ ಜೊತೆ ಜಯಂ ರವಿ ಹೆಸರು ಥಳುಕು ಹಾಕಿಕೊಂಡಿತ್ತು. ಆಕೆಯೊಂದಿಗೆ ಜಯಂ ರವಿ ಗೋವಾದಲ್ಲಿ ಇದ್ದರಂತೆ. ಈ ವಿಚಾರ ತಿಳಿದು ಪತ್ನಿ ಆರತಿ ಗೋವಾಕ್ಕೆ ತೆರಳಿ ರೆಸಾರ್ಟ್ನಲ್ಲಿ ರಾದ್ಧಾಂತ ಮಾಡಿದ್ದರಂತೆ, ಬಳಿಕ ಪತ್ನಿ ಸುಮ್ಮನಿದ್ದರೆ ಜಯಂ ರವಿ ಅಲ್ಲಿಂದಲೇ ವಿಚ್ಛೇದನ ಘೋಷಿಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಕೋಪಗೊಂಡ ಆರತಿ ಪತ್ನಿಯನ್ನ ಮನೆಗೆ ಬಿಟ್ಟುಕೊಳ್ತಿಲ್ಲ. ಹೀಗಾಗಿ ತಮ್ಮ ವಸ್ತುಗಳನ್ನ ಕೊಡಿಸುವಂತೆ ಜಯಂ ರವಿ ಈಗ ಕೋರ್ಟ್ ಮೊರೆಹೋಗಬೇಕಾದ ಸ್ಥಿತಿ ಎದುರಾಗಿದೆ. ಇನ್ನು ಇವರಿಬ್ಬರ ವಿಚ್ಚೇದನ ಗಲಾಟೆ ಅದೆಷ್ಟು ವರ್ಷಗಳು ಮುಂದುವರೆಯುತ್ತದೆಯೋ!

Share This Article