ಮುಂಬೈ: ತನ್ನೊಂದಿಗೆ ಪತಿ ಬಲವಂತವಾಗಿ ಅನೈಸರ್ಗಿಕವಾಗಿ ಸೆಕ್ಸ್ ಮಾಡುತ್ತಿದ್ದಾನೆಂದು ಮಹಿಳೆಯೊಬ್ಬಳು ಆತನ ವಿರುದ್ಧ ಭೋಸಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ.
ಮದುವೆಯಾದ ಮೊದಲ ರಾತ್ರಿಯಿಂದಲೂ ಬಲವಂತವಾಗಿ ಸೆಕ್ಸ್ ಮಾಡುತ್ತಿದ್ದಾನೆ ಎಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಹಿಳೆ ನೀಡಿದ ದೂರಿನ ಅನ್ವಯ ಪೊಲೀಸರು ಪತಿಯ ವಿರುದ್ಧ ದೂರು ದಾಖಲಿಸಿಕೊಂಡು ಸಂಬಂಧಪಟ್ಟ ಪೊಲೀಸ್ ಠಾಣೆಗೆ ವರ್ಗಾಹಿಸಿದ್ದಾರೆ. ಪತಿ ಜೊತೆಗೆ ಅತ್ತೆ-ಮಾನವ ವಿರುದ್ಧವೂ ಮಹಿಳೆ ದೂರು ದಾಖಲಿಸಿದ್ದಾರೆ.
Advertisement
Advertisement
ಕೆಲವು ತಿಂಗಳ ಹಿಂದೆ ಮಹಿಳೆಗೆ ಮದುವೆಯಾಗಿತ್ತು. ಮದುವೆಯಾದ ಮೊದಲ ರಾತ್ರಿಯಲ್ಲಿ ಆರೋಪಿ ಪತಿ ಭಯಪಡುತ್ತಿದ್ದನಂತೆ. ಆಗ ಮಹಿಳೆ ಏನಾಯಿತು ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಪತಿ ನಾನು ಮೊದಲು ಪೋರ್ನ್ ವಿಡಿಯೋ ನೋಡುತ್ತೇನೆ. ನಂತರ ಸೆಕ್ಸ್ ಮಾಡುತ್ತೀನಿ ಎಂದು ಹೇಳಿದ್ದಾನೆ. ಇದಕ್ಕೆ ಪತ್ನಿ ನಿರಾಕರಿಸಿದ್ದಾರೆ, ಆದರೆ ಮರುದಿನ ಆತನ ಉದ್ದೇಶವನ್ನು ಪತ್ನಿಯ ಬಳಿ ಸ್ಪಷ್ಟವಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಆರೋಪಿ ಪತಿ, ನಾವು ಅನೈಸರ್ಗಿಕವಾಗಿ ದೈಹಿಕ ಸಂಪರ್ಕ ಹೊಂದಬೇಕು ಎಂದು ಹೇಳಿದ್ದಾನೆ. ಇದಕ್ಕೆ ಪತ್ನಿ ವಿರೋಧ ವ್ಯಕ್ತಪಡಿಸಿದ್ದಾರೆ. ಆಗ ಬಲವಂತವಾಗಿ ಆಕೆಯೊಂದಿಗೆ ಅನೈಸರ್ಗಿಕವಾಗಿ ಸೆಕ್ಸ್ ಮಾಡಿದ್ದಾನೆ. ಈ ಬಗ್ಗೆ ಅತ್ತೆಗೆ ಹೇಳಿದಾಗ, ಆಕೆಯೊಂದಿಗೆ ಸೇರಿಕೊಂಡು ಪತಿಯೂ ಬೈದು ಹೊಡೆಯುತ್ತಿದ್ದನು. ಕೊನೆಗೆ ಮಹಿಳೆ ತವರು ಮನೆಗೆ ಹೋದಾಗ ನಡೆದ ಘಟನೆಯನ್ನು ಪೋಷಕರಿಗೆ ತಿಳಿಸಿದ್ದಾಳೆ. ನಂತರ ಅವರೊಂದಿಗೆ ಭೋಸಾರಿ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ.