– ನಗ್ನ ಫೋಟೋ ತೆಗೆದು ಪತ್ನಿಯಿಂದಲೇ ಬ್ಲ್ಯಾಕ್ ಮೇಲ್
– 30 ಲಕ್ಷ ಹಣ, ಚಿನ್ನಕ್ಕೆ ಬೇಡಿಕೆ; ಪತಿಯಿಂದ ಪ್ರತಿ ದೂರು
ಬೆಂಗಳೂರು: ನನ್ನ ಗಂಡ ವಿಚಿತ್ರವಾಗಿ ವರ್ತನೆ ಮಾಡ್ತಾನೆ.. ಮನೆಯಲ್ಲಿ ತಂದೆ ತಾಯಿ ಮುಂದೆಯೇ ಬೆತ್ತಲೆ ಓಡಾಡ್ತಾನೆ.. ವಿಡಿಯೋ ತೋರಿಸಿ ಅದ್ರಂತೆ ಲೈಂಗಿಕ ಕ್ರಿಯೆ ಮಾಡು ಅಂತಾ ಒತ್ತಾಯ ಮಾಡ್ತಾನೆ ಎಂದು ಆರೋಪಿಸಿ ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿ ಮೇಘಶ್ರೀ ಪತಿ ವಿರುದ್ಧ ಕೇಂದ್ರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬೆಂಗಳೂರಿನ ವಿಲ್ಸನ್ ಗಾರ್ಡನ್ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆಯಷ್ಟೆ ಪತ್ನಿ ಮೇಘಶ್ರೀ ಕೊಟ್ಟಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಪತ್ನಿ ವಿರುದ್ಧ ಪತಿ ಮಂಜುನಾಥ್ ಕಾನೂನು ಹೋರಾಟ ಮಾಡಲು ಮುಂದಾಗಿದ್ದಾರೆ.
ಪತಿಯಿಂದಲೂ ದೂರು
ಮೇಘಶ್ರೀ ಆರೋಪಗಳ ವಿರುದ್ಧ ಪ್ರತಿದೂರು ದಾಖಲಿಸಲು ಮುಂದಾಗಿರುವ ಪತಿ ಮಂಜುನಾಥ್, ಮೇಘಶ್ರೀ ದೂರು ಸುಳ್ಳು ಎಂದು ಹೇಳಿದ್ದಾರೆ.
30 ಲಕ್ಷ ಹಣ ಹಾಗೂ 50 ಚಿನ್ನಕ್ಕಾಗಿ ಮೇಘಶ್ರೀ ಬ್ಲ್ಯಾಕ್‌ಮೇಲ್ ಮಾಡ್ತಿದ್ದಾಳೆ. ಮೇಘಾ ಈ ಮೊದಲು ಎರಡು ಮದುವೆ ಆಗಿದ್ದಳು. ಇಬ್ಬರ ವಿರುದ್ಧವೂ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟು ಇಬ್ಬರಿಗೂ ಡಿವೋರ್ಸ್ ಕೊಟ್ಟು ನನ್ನನ್ನ ಮದ್ವೆ ಆದಳು. ಇದೀಗ ಮದುವೆಯಾದ ಮೂರೇ ತಿಂಗಳಿಗೆ ನನ್ನ ವಿರುದ್ಧವೂ ದೂರು ನೀಡಿದ್ದಾಳೆ.
ಒಂದೇ ಕಂಪನಿಯಲ್ಲಿ ಕೆಲಸ ಮಾಡುವಾಗ ಪರಿಚಯವಾಗಿ ಮದುವೆಯಾಗಿದ್ದು ನಾವು. ಶೋಕಿಗೆ ಗಂಡಂದಿರ ಹಣ ಬಳಸಿಕೊಂಡು ಹೀಗೆ ಮಾಡ್ತಿದ್ದಾಳೆ. ಮೇಘ ನನ್ನ ಬಳಿ 30 ಲಕ್ಷ ಹಣ, 50 ಗ್ರಾಂ ಚಿನ್ನ, ಐಪೋನ್, ಐಪ್ಯಾಡ್, ಟ್ಯಾಬ್ ಪಡೆದಿದ್ದಾರೆಂದು ಆರೋಪಿಸಿದ್ದಾರೆ.
ತನ್ನ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ ಮೇಘಶ್ರೀ ವಿರುದ್ಧ ಕಾನೂನು ಹೋರಾಟಕ್ಕೆ ಮೇಘಶ್ರೀಯ ಅಸಲಿ ಮುಖವಾಡವನ್ನ ಪೊಲೀಸರ ಮುಂದೆ ಬಯಲು ಮಾಡ್ತೀನಿ ಎಂದು 3ನೇ ಗಂಡ ಮಂಜುನಾಥ್ ಆಕ್ರೋಶ ಹೊರ ಹಾಕಿದ್ದಾರೆ.
ಬೇರೊಬ್ಬರ ಜೊತೆ ಮಲಗುವಂತೆ ಒತ್ತಾಯ ಮಾಡ್ತಾನೆ
ಇನ್ನು ಪತಿಯ ಆರೋಪಗಳ ಬಗ್ಗೆ ಮಾತನಾಡಿರುವ ಮೇಘಶ್ರೀ, ನಾನು ಮಂಜುನಾಥ್‌ನಿಂದ 1 ರೂಪಾಯಿ ಕೂಡ ಪಡೆದಿಲ್ಲ. ನನಗೆ ಎರಡು ಮದುವೆ ಯಾಗಿ ಡಿವೋರ್ಸ್ ಆಗಿರುವುದು ನಿಜ. ಇದು ಮಂಜುನಾಥ್‌ಗೂ ಗೊತ್ತಿದೆ. ಡಿವೋರ್ಸ್ ಆದ ಬಳಿಕವೇ ನಾವು ಮದುವೆಯಾಗಿದ್ದು, ಆದ್ರೆ ಮದುವೆಯಾದ ಕೆಲವೇ ದಿನಗಳಲ್ಲಿ, ಅವನ ನಿಜ ಬಣ್ಣ ಬಯಲಾಯ್ತು. ಬೇರೊಬ್ಬರೊಂದಿಗೆ ಮಲಗುವಂತೆ ಒತ್ತಾಯ ಮಾಡುತ್ತಾನೆ. ಪತ್ನಿಯ ಫೋಟೋಗಳನ್ನು ಮತ್ತೊಬ್ಬನೊಂದಿಗೆ ಹಂಚಿಕೊಳ್ಳುತ್ತಾನೆ. ಇವರೊಂದಿಗೆ ಹೇಗೆ ನಾನು ಜೀವನ ಮಾಡಲಿ? ಎಂದು ಪ್ರಶ್ನಿಸಿದ್ದಾರೆ.



