ಚಿಕ್ಕಬಳ್ಳಾಪುರ: ಪ್ರೀತಿಸಿದ ಪತಿಯ ಸಾವಿನ ಆಗಲಿಕೆಯಿಂದ ಮನನೊಂದ ಪತ್ನಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದಲ್ಲಿ ನಡೆದಿದೆ.
ಮೀನಾ(28) ಆತ್ಮಹತ್ಯೆಗೆ ಶರಣಾದ ಪತ್ನಿ. ಅಂದಹಾಗೆ ನ.21ರಂದು ಮೀನಾಳ ಗಂಡ ಹರೀಶ್ನನ್ನು ಆಕೆಯ ತಮ್ಮ ವಿನಯ್ನೇ ಕೊಲೆ ಮಾಡಿದ್ದನು. ಹೀಗಾಗಿ ತನ್ನ ಪತ್ನಿಯ ಅಗಲಿಕೆ ಹಾಗೂ ತಮ್ಮನ ಕೃತ್ಯದಿಂದ ಸಾಕಷ್ಟು ಮನನೊಂದಿದ್ದ ಮೀನಾ ತಡರಾತ್ರಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
Advertisement
Advertisement
ಹರೀಶ್ ಕೊಲೆ ಯಾಕಾಯ್ತು?
ಕೊಲೆಯಾದ ಮೀನಾಳ ಗಂಡ ಹರೀಶ್ ಹಾಗೂ ಕೊಲೆ ಮಾಡಿದ ಮೀನಾಳ ತಮ್ಮ ಇಬ್ಬರು ಸ್ನೇಹಿತರಾಗಿದ್ದರು. ಹೀಗಾಗಿ ವಿನಯ್ ಮನೆಗೆ ಆಗಾಗ ಹೋಗುತ್ತಿದ್ದ ಹರೀಶ್, ತನ್ನ ಅಕ್ಕ ಮೀನಾಳನ್ನು ಪ್ರೀತಿ ಮಾಡುತ್ತಿದ್ದ. ಕೊನೆಗೆ ವಿನಯ್ ಸೇರಿ ಮೀನಾಳ ಕುಟುಂಬಸ್ಥರನ್ನು ಎದುರು ಹಾಕಿಕೊಂಡು ಕಳೆದ 6 ತಿಂಗಳ ಹಿಂದೆ ಅಂತರ್ಜಾತಿ ವಿವಾಹವಾಗಿದ್ದ.
Advertisement
ಹೀಗಾಗಿ ನನ್ನ ಜೊತೆಯಲ್ಲೇ ಮನೆಗೆ ಬಂದು ನನ್ನ ಅಕ್ಕನನ್ನೇ ಸ್ನೇಹಿತ ಪ್ರೀತಿಸಿ ಮದುವೆಯಾದ ಎನ್ನುವ ಭಾವನೆ ಹಾಗೂ ಇಬ್ಬರು ಬೇರೆ ಬೇರೆ ಜಾತಿಯಾದ ಕಾರಣ ವಿನಯ್ ಹಾಗೂ ಹರೀಶ್ ನಡುವೆ ಎರಡು ಮೂರು ಬಾರಿ ಗಲಾಟೆ ನಡೆದಿತ್ತು. ಆದರೆ ನವೆಂಬರ್ 21ರಂದು ಚೀಟಿ ಹಣ ಕೊಡುವುದಕ್ಕೆ ಅಂತ ಮನೆಯಿಂದ ಬಂದ ಹರೀಶ್ಗೆ ವಿನಯ್ ಸಿಕ್ಕಿದ್ದಾನೆ.
Advertisement
ಈ ವೇಳೆ ಮೊದಲೇ ಪ್ಲಾನ್ ಮಾಡಿದಂತೆ ಮಾತಾಡೋ ಬಾ ಅಂತ ಗುಲಾಬಿ ತೋಟಕ್ಕೆ ಹರೀಶ್ ನನ್ನು ಕರೆದುಕೊಂಡು ಹೋಗಿದ್ದ. ಬಳಿಕ ವಿನಯ್ ಆತನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದನು. ಕೊನೆಗೆ ಬೆಳಗ್ಗೆ ವಿಷಯ ಗೊತ್ತಾಗುತ್ತಿದ್ದಂತೆಯೇ ತಾನೇ ಪೊಲೀಸರಿಗೆ ಶರಣಾಗಿದ್ದನು. ಇಂದು ಪತಿಯ ಸಾವಿನ ನೋವಿನಿಂದ ಮನನೊಂದಿದ್ದ ಮೀನಾ ಕೂಡ ಆತ್ಮಹತ್ಯೆ ಹಾದಿ ಹಿಡಿದಿದ್ದಾಳೆ.
ಮೀನಾಳ ಆತ್ಮಹತ್ಯೆ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಯಾದ ಹರೀಶ್ ಪ್ರಕರಣ ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv