ಶಿವಮೊಗ್ಗ: ಪತ್ನಿ ತನ್ನ ಪ್ರಿಯಕರನ ಜೊತೆ ಲಾಡ್ಜ್ ನಲ್ಲಿ ಸೆಕ್ಸ್ ಮಾಡುವಾಗ ತನ್ನ ಪತಿಯ ಕೈಗೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದು, ಪೊಲೀಸರು ಕೇಸ್ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಪ್ರಕರಣವೊಂದು ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.
ವಂದನ(ಹೆಸರು ಬದಲಾಯಿಸಲಾಗಿದೆ) ಪರ ಪುರುಷನೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಹಿಳೆ. ವಂದನ 2015ರಲ್ಲಿ ವಿರೂಪಾಕ್ಷ ಎಂಬವರ ಜೊತೆ ಮದುವೆ ಆಗಿದ್ದಳು. ಆದರೆ ಮದುವೆ ಆದಾಗಿನಿಂದ ವಂದನ ತನ್ನ ಪತಿ ಮನೆಗೆ ಬರುತ್ತಿರಲಿಲ್ಲ ಎಂಬುದು ತಿಳಿದು ಬಂದಿದೆ.
ಇದರಿಂದ ವಿರೂಪಾಕ್ಷ ತನ್ನ ಪತ್ನಿಯ ಮೇಲೆ ಅನುಮಾನಿಸಲು ಶುರು ಮಾಡಿದ್ದಾನೆ. ಹೀಗಾಗಿ ಆಕೆಯನ್ನು ಹಿಂಬಾಲಿಸಿಕೊಂಡು ಹೋದನು. ವಿರೂಪಾಕ್ಷ ತನ್ನ ಪತ್ನಿಯನ್ನು ಹಿಂಬಾಲಿಸಿಕೊಂಡು ಹೋದಾಗ ಆಕೆಯ ಅನೈತಿಕ ಸಂಬಂಧ ಪತ್ತೆಯಾಗಿದೆ.
ಭಾನುವಾರ ಶಿವಮೊಗ್ಗದ ಲಾಡ್ಜ್ ನಲ್ಲಿ ವಂದನ ತನ್ನ ಪ್ರಿಯಕರನ ಜೊತೆ ಒಂದೇ ರೂಮಿನಲ್ಲಿ ಪತ್ತೆಯಾಗಿದ್ದಾಳೆ. ವಿರೂಪಾಕ್ಷ ಪೊಲೀಸರ ಸಹಾಯದಿಂದ ಲಾಡ್ಜ್ ರೂಮ್ ತೆಗೆಸಿದ್ದನು. ರೂಮ್ ಬಾಗಿಲು ತೆಗೆಯುತ್ತಿದ್ದಂತೆ ವಿರೂಪಾಕ್ಷನಿಗೆ ತನ್ನ ಪತ್ನಿಯ ಅಕ್ರಮ ಸಂಬಂಧ ಬೆಳಕಿಗೆ ಬಂದಿದೆ.
ಸದ್ಯ ಪೊಲೀಸರು ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಅನೈತಿಕ ಸಂಬಂಧ ಅಪರಾಧವಲ್ಲ ಎಂದು ಸುಪ್ರೀಂ ತೀರ್ಪು ನೀಡಿದೆ ಎಂದು ಹೇಳಿ ಅನೈತಿಕ ಸಂಬಂಧ ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv