ತಿರುವನಂತಪುರಂ: ವಿವಾಹಿತ ಮಹಿಳೆ ಗರ್ಭಪಾತ ಮಾಡಿಸಲು ಪತಿಯ ಅನುಮತಿಯನ್ನು ಪಡೆಯುವ ಅಗತ್ಯವಿಲ್ಲ ಎಂದು ಕೇರಳ ಹೈಕೋರ್ಟ್ (Kerala High Court) ಸೋಮವಾರ ತಿಳಿಸಿದೆ.
ಕೇರಳ ಹೈಕೋರ್ಟ್‍ನಲ್ಲಿ ನ್ಯಾಯಮೂರ್ತಿ ವಿಜಿ ಅರುಣ್ ಅವರಿದ್ದ ಏಕಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿತು. 21 ವರ್ಷ ವಯಸ್ಸಿನ ಗರ್ಭಿಣಿಯೊಬ್ಬರು (Pregnancy) 21 ವಾರಗಳ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ (Medical Termination of Pregnancy Act) ಮುಕ್ತಾಯಗೊಳಿಸಲು ಅನುಮತಿ ಕೋರಿ ಸಲ್ಲಿಸಿದ ಮನವಿಯ ಮೇರೆಗೆ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ಈ ವೇಳೆ ಗರ್ಭಿಣಿ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿರುವುದಿಲ್ಲ ಅಥವಾ ವಿಧವೆಯಾಗಿರುವುದಿಲ್ಲ.
Advertisement
ಗರ್ಭಾವಸ್ಥೆಯ ಮತ್ತು ಹೆರಿಗೆಯ ಸಮಯದಲ್ಲಿ ಒತ್ತಡ ಮತ್ತು ನೋವು ಅನುಭವಿಸುವುದು ಮಹಿಳೆಯರು ಎಂಬ ಕಾರಣವನ್ನು ಉಲ್ಲೇಖಿಸಿ, ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸಲು ಮಹಿಳೆ ತನ್ನ ಪತಿಯ ಅನುಮತಿಯನ್ನು ಪಡೆಯುವ ಯಾವುದೇ ಅಗತ್ಯವಿರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ಎಕ್ಸಾಂ ನಡೆಯುತ್ತಿದ್ದ ಸ್ಕೂಲ್‍ಗೆ ನುಗ್ಗಿದ ಹಿಂದೂ ಮುನ್ನನ್ನಿ ಸದಸ್ಯರು – ಶಾಲೆ ಮುಚ್ಚುವಂತೆ ಒತ್ತಾಯ
Advertisement
Advertisement
ಮಹಿಳೆ ತಾನು ಪ್ರೀತಿ ಮಾಡುತ್ತಿದ್ದ ವ್ಯಕ್ತಿ ಜೊತೆಗೆ ಕೆಲವು ತಿಂಗಳ ಹಿಂದೆಯಷ್ಟೇ ಓಡಿ ಹೋಗಿ ಮದುವೆಯಾಗಿದ್ದಳು. ಆದರೆ ಮದುವೆಯ ನಂತರ ಆತ ಮತ್ತು ಆತನ ತಾಯಿ ಇಬ್ಬರು ಆಕೆಯನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು. ಅಲ್ಲದೇ ಮಹಿಳೆ ಗರ್ಭಿಣಿಯಾದ ವೇಳೆ ಆಕೆಯನ್ನು ಅನುಮಾನದಿಂದ ಕಾಣಲು ಆರಂಭಿಸಿದ. ಆಕೆಯನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಆಕೆಯ ಭಾವನೆಗಳಿಗೆ ಸ್ಪಂದಿಸುತ್ತಿರಲಿಲ್ಲ. ದಿನೇ ದಿನೆ ಆಕೆಯ ಪತಿ ಮತ್ತು ಅತ್ತೆ ಚಿತ್ರಹಿಂಸೆ ನೀಡಲಾರಂಭಿಸಿದರು. ಕೊನೆಗೆ ಗಂಡನ ಮನೆ ಬಿಟ್ಟು ಮಹಿಳೆ ತವರು ಸೇರಬೇಕಾಯಿತು.
Advertisement
ನಂತರ ಮಹಿಳೆ ತನ್ನ ಗರ್ಭಾವಸ್ಥೆಯನ್ನು ಮುಕ್ತಾಯಗೊಳಿಸಲು ನಿರ್ಧರಿಸಿ, ಕ್ಲಿನಿಕ್ ಅನ್ನು ಸಂಪರ್ಕಿಸಿದರು. ಆದರೆ ಕ್ಲಿನಿಕ್‍ನವರು ನೀವು ಪತಿಯಿಂದ ಬೇರ್ಪಟ್ಟಿರುವುದು ಸಾಬೀತಾಗಿದೆ ಎನ್ನಲು ಯಾವುದಾದರೂ ದಾಖಲೆ ನೀಡುವಂತೆ ತಿಳಿಸಿತು. ಈ ವೇಳೆ ಯಾವುದೇ ಕಾನೂನು ದಾಖಲೆ ಇಲ್ಲದ ಕಾರಣ ಮಹಿಳೆ ಈ ಕುರಿತಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು. ಇದನ್ನೂ ಓದಿ: ಕಟೀಲ್ ಒಬ್ಬ ವಿದೂಷಕ, ಪಾಪ ಇನ್ನೂ ಮೆಚ್ಯೂರಿಟಿ ಇಲ್ಲ: ಸಿದ್ದರಾಮಯ್ಯ
ಮಹಿಳೆ ತನ್ನ ಪತಿಯ ಮೇಲೆ ಕ್ರಿಮಿನಲ್ ದೂರು ದಾಖಲಿಸಿದ್ದು, ಪತಿ ತನ್ನೊಂದಿಗೆ ಜೀವನ ನಡೆಸಲು ಇಚ್ಛಿಸುತ್ತಿಲ್ಲ ಎಂಬ ಅಂಶವನ್ನು ಕೋರ್ಟ್ ವಿಚಾರಣೆ ವೇಳೆ ಗಮನಿಸಿದೆ. ಆಕೆಯ ವೈವಾಹಿಕ ಜೀವನದಲ್ಲಿ ತೀವ್ರ ಬದಲಾವಣೆಯಾಗಿರುವುದನ್ನು ನ್ಯಾಯಾಲಯ ಗಮನದಲ್ಲಿಟ್ಟುಕೊಂಡು, ಅರ್ಜಿದಾರರಿಗೆ ಕೊಟ್ಟಾಯಂನ ವೈದ್ಯಕೀಯ ಕಾಲೇಜು ಅಥವಾ ಇತರ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆ ಗರ್ಭಧಾರಣೆಯನ್ನು ಮುಕ್ತಾಯಗೊಳಿಸಲು ಅನುಮತಿ ನೀಡಿ ಆದೇಶವನ್ನು ಹೊರಡಿಸಿದೆ.