ಭೋಪಾಲ್: ಮನೆ ಸ್ವಚ್ಛಗೊಳಿಸುವಾಗ ಮದುವೆ ಆಲ್ಬಂವೊಂದು ಸಿಕ್ಕಿದ್ದು, ಅದನ್ನು ನೋಡಿದ ಪತ್ನಿ ತನ್ನ ಪತಿಗೆ ಈಗಾಗಲೇ 7 ಮದುವೆ ಆಗಿದೆ ಎಂದು ವಿಷಯ ತಿಳಿದು ಕಂಗಾಲಾದ ಘಟನೆ ಮಧ್ಯಪ್ರದೇಶದ ಜಹಂಗಿಬಾದ್ನಲ್ಲಿ ನಡೆದಿದೆ.
ಪತ್ನಿ ಮನೆ ಸ್ವಚ್ಛಗೊಳಿಸುವಾಗ ಮದುವೆ ಆಲ್ಬಂ ನೋಡಿ ಪತಿಗೆ ಈಗಾಗಲೇ 7 ಮದುವೆ ಆಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಆಕೆ ತನ್ನ ಪತಿ ಬಳಿ ಕೇಳಿದಾಗ ಆತ ಆ ಮದುವೆ ಆಲ್ಬಂ ಸುಟ್ಟು ಹಾಕಿದ್ದಾನೆ.
Advertisement
Advertisement
ಆಲ್ಬಂ ಸುಟ್ಟು ಹಾಕಿದ ನಂತರ, ಪತಿಯ ಈ ವರ್ತನೆಯ ಬಗ್ಗೆ ನನಗೆ ಅನುಮಾನ ಹೆಚ್ಚಾಯಿತು. ಈ ವಿಷಯದ ಬಗ್ಗೆ ಪತಿಗೆ ಪ್ರಶ್ನಿಸಿದ್ದಾಗ, ಆತ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ ನನ್ನ ಪತಿ ಈಗ ಒಂಬತ್ತನೇ ಮದುವೆ ಮಾಡಿಕೊಳ್ಳಲು ಎಲ್ಲ ತಯಾರಿ ನಡೆಸಿಕೊಂಡಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ.
Advertisement
ಮಹಿಳೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆ ವ್ಯಕ್ತಿಯ ಏಳು ಪತ್ನಿಯನ್ನು ಕರೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ಠಾಣೆಗೆ ತಲುಪಿದ ಏಳು ಪತ್ನಿಯರಲ್ಲಿ ಇಬ್ಬರು ಪತ್ನಿಯರು ತಮ್ಮ ಪತಿ ವಿರುದ್ಧ ದೂರು ದಾಖಲಿಸಲು ನಿರಾಕರಿಸಿದ್ದಾರೆ.
Advertisement
ಈ ಪ್ರಕರಣದ ಬಗ್ಗೆ ಪೊಲೀಸರು ಕೌನ್ಸಿಲಿಂಗ್ ಮಾಡುತ್ತಿದ್ದಾರೆ. ಪತಿಗೆ ಈಗಾಗಲೇ ಮದುವೆಯಾಗಿದ್ದು, ಮೋಸ ಮಾಡಿ ಮತ್ತೊಂದು ಮದುವೆಯಾಗಿದ್ದಾನೆ. ಒಂದು ಮಗುವಾದ ಬಳಿಕ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾನೆ. ಈ ಬಗ್ಗೆ ತನ್ನ ಅತ್ತೆಗೆ ಹೇಳಿದ್ದಾಗ ಅವರು ಕೂಡ ತಮ್ಮ ಮಗನ ಪರವಾಗಿ ಮಾತನಾಡುತ್ತಾರೆ. ನನಗೆ ಸುಮ್ಮನಿರಲು ಹೇಳುತ್ತಾರೆ ಎಂದು ಪತ್ನಿ ಪೊಲೀಸರ ಬಳಿ ಆರೋಪಿಸಿದ್ದಾಳೆ.
ನಾನು ನನ್ನ ಕೋಣೆಯನ್ನು ಸ್ವಚ್ಛಗೊಳಿಸುವಾಗ ಒಂದು ಆಲ್ಬಂ ಸಿಕ್ಕಿತ್ತು. ಆ ಆಲ್ಬಂ ನೋಡಿದ್ದಾಗ ನನ್ನ ಪತಿಗೆ ಬೇರೆ ಮಹಿಳೆಯರ ಜೊತೆ ಮದುವೆ ಆಗಿದೆ ಎಂಬ ವಿಷಯ ತಿಳಿಯಿತು. ನನ್ನ ಪತಿ ಒಂದಲ್ಲ, ಎರಡಲ್ಲ ಬರೋಬ್ಬರು 8 ಮದುವೆ ಆಗಿದ್ದಾನೆ ಎಂದು ಗೊತ್ತಾಯಿತು. 8 ಮಹಿಳೆಯರಲ್ಲಿ ಇಬ್ಬರು ಬೇರೆ ಧರ್ಮದವರು ಎಂದು ಮಹಿಳೆ ಕೌನ್ಸಿಲರ್ ಬಳಿ ಹೇಳಿಕೊಂಡಿದ್ದಾರೆ.
ನಾನು ಮಿನಿ ಬಸ್ನಲ್ಲಿ ಪ್ರಯಾಣ ನಡೆಸುವಾಗ ನನಗೆ ನನ್ನ ಪತಿಯ ಪರಿಚಯವಾಗಿತ್ತು. ಪರಿಚಯವಾಗಿ ಇಬ್ಬರು ಪ್ರೀತಿಸಲು ಶುರು ಮಾಡಿದ್ವಿ. ಬಳಿಕ ನಮ್ಮ ಪ್ರೀತಿಯ ವಿಷಯವನ್ನು ಪೋಷಕರಿಗೆ ಹೇಳಿ ಅವರ ಅನುಮತಿ ಪಡೆದು ಮೇ 2016ರಲ್ಲಿ ಮದುವೆ ಆಗಿದ್ದೀವೆ. ಮದುವೆ ಆಗಿ ಮೂರು ವರ್ಷ ಆತ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದನು. ಆದರೆ ಮದುವೆಯಾಗಿ ಮಗುವಾದ ಬಳಿಕ ಆತ ನನ್ನನ್ನು ಹೊಡೆಯಲು ಶುರು ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.