ಜಕಾರ್ತ: ಫೋನ್ ಪಾಸ್‍ವರ್ಡ್ ಕೊಡಲಿಲ್ಲ ಅಂತ ಪತ್ನಿ ಪತಿಗೆ ಬೆಂಕಿ ಹಚ್ಚಿ ಕೊಂದ ಭಯಾನಕ ಘಟನೆ ಇಂಡೋನೇಷ್ಯಾದ ಪಶ್ಚಿಮ ನುಸಾ ಟೆಂಗ್ಗಾರ ಪ್ರಾಂತ್ಯದಲ್ಲಿ ನಡೆದಿದೆ.
ಪೂರ್ವ ಲೊಂಬೊಕ್ ರೀಜೆನ್ಸಿ ನಿವಾಸಿಯಾದ ದೀದಿ ಪೂರ್ನಾಮ (26) ಮೃತ ದುರ್ದೈವಿ. ಇಲ್ಹಾಮ್ ಕಹ್ಯಾನಿ(25) ಕೊಲೆ ಮಾಡಿರುವ ಪತ್ನಿ. ಕಳೆದ ಶನಿವಾರ ಪೂರ್ನಾಮ ತನ್ನ ಮನೆಯ ಮೇಲ್ಛಾವಣಿಯನ್ನು ರಿಪೇರಿ ಮಾಡುತ್ತಿದ್ದನು. ಈ ವೇಳೆ ಪತ್ನಿ ಆತನ ಫೋನ್ ಪಾಸ್‍ವರ್ಡ್ ಕೇಳಿದ್ದಾಳೆ. ಆಗ ಪತಿ ಪಾಸ್‍ವರ್ಡ್ ನೀಡದೇ ಪತ್ನಿ ಜೊತೆ ಜಗಳವಾಡಿದ್ದಾನೆ. ಬಳಿಕ ಜಗಳ ತಾರಕಕ್ಕೆ ಏರಿ ಪೂರ್ನಾಮ ಪತ್ನಿಗೆ ಹೊಡೆದಿದ್ದಾನೆ.
Advertisement
Advertisement
ಇಷ್ಟಕ್ಕೆ ಕೋಪಗೊಂಡ ಪತ್ನಿ ತಕ್ಷಣ ಪಕ್ಕದಲ್ಲೇ ಇದ್ದ ಪೆಟ್ರೋಲ್ ಬಾಟಲ್ ಎತ್ತಿಕೊಂಡು ಪತಿಯ ಮೇಲೆ ಸುರಿದು ಬೆಂಕಿ ಹಚ್ಚಿದ್ದಾಳೆ. ಬೆಂಕಿ ಹಚ್ಚಿದ ಪರಿಣಾಮ ಪೂರ್ನಾಮನ ಅರ್ಧ ದೇಹ ಸಂಪೂರ್ಣ ಸುಟ್ಟುಹೋಗಿದೆ. ಇದನ್ನು ನೋಡಿದ ಸ್ಥಳೀಯರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಎರಡು ದಿನದ ಬಳಿಕ ಪೂರ್ನಾಮ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ.
Advertisement
ಸದ್ಯ ಪತಿಯನ್ನು ಬಲಿ ಪಡೆದ ಪತ್ನಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv