ಬೆಂಗಳೂರು: ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಮದುವೆಯಾದ ಪತಿಯನ್ನು ಹಾಗೂ ಆತನ ಪ್ರೇಯಸಿಯ ಪತ್ನಿ ಚಳಿ ಬಿಡಿಸಿದ ಘಟನೆಯೊಂದು ಬೆಂಗಳೂರಿನ ಕಾಡುಗೋಡಿಯ ಬಾಲಾಜಿ ಅಪಾರ್ಟ್ ಮೆಂಟ್ ಬಳಿ ನಡೆದಿದೆ.
ದಾಸರಹಳ್ಳಿಯ ಸುಂದರೇಶ್ ಎಂಬವನು ಆಶಾ ಅವರನ್ನು ಮದುವೆ ಆಗಿದ್ದನು. ಮದುವೆ ಬಳಿಕ ಸುಂದರೇಶ್, ಜ್ಯೋತಿ ಎನ್ನುವ ಹೌಸ್ ಕೀಪಿಂಗ್ ಜೊತೆ ಲವ್ವಿ ಡವ್ವಿ ಶುರು ಹಚ್ಚಿಕೊಂಡಿದ್ದನು.
Advertisement
Advertisement
ಈ ಹಿಂದೆ ಸುಂದರೇಶ್ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಜ್ಯೋತಿ ಹೌಸ್ ಕೀಪಿಂಗ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಳು. ಆಗ ಸುಂದರೇಶ್, ಜ್ಯೋತಿಯನ್ನು ಪರಿಚಯ ಮಾಡಿಕೊಂಡಿದ್ದ. ಈಗ ಜ್ಯೋತಿ ಬಾಲಾಜಿ ಅಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದು ಇಲ್ಲೂ ತನ್ನ ಪ್ರೀತಿಯನ್ನು ಮುಂದುವರಿಸಿದ್ದ.
Advertisement
Advertisement
ಸುಂದರೇಶ್ಗೆ ಈಗಾಗಲೇ ಮೂರು ಮದುವೆ ಆಗಿದೆ. ಅಲ್ಲದೇ ಸುಳ್ಳು ಹೇಳಿ ನಾಲ್ಕನೇ ಮದುವೆ ಕೂಡ ಆಗಿದ್ದಾನೆ. ಈಗ ಜ್ಯೋತಿ ಜೊತೆ ಲವ್ವಿ ಡವ್ವಿ ಶುರು ಮಾಡಿಕೊಂಡಿರುವ ವಿಚಾರ ತಿಳಿದು ಬಾಲಾಜಿ ಅಪಾರ್ಟ್ಮೆಂಟ್ನ ಮುಂದೆ ಸುಂದರೇಶ್ ಪತ್ನಿ ಆಶಾ ರೊಚ್ಚಿಗೆದ್ದು ಪತಿಗೆ ಹಾಗೂ ಆತನ ಪ್ರೇಯಸಿಗೆ ಗೂಸಾ ನೀಡಿದ್ದಾಳೆ. ಅಲ್ಲದೇ ಜ್ಯೋತಿಯ ಕತ್ತಿನ ಪಟ್ಟಿ ಹಿಡಿದು ಆಕೆಯ ಕೆನ್ನೆಗೆ ಹೊಡೆದಿದ್ದಾಳೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv