ಬೆಂಗಳೂರು: ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿದ ಗಂಡನಿಗೆ ಪತ್ನಿ ಚಳಿ ಬಿಡಿಸಿದ ಘಟನೆ ಬೆಂಗಳೂರಿನ 8ನೇ ಮೈಲಿಯಲ್ಲಿ ನಡೆದಿದೆ.
ಮಗು ನಂದಲ್ಲ ನನಗೆ ಹುಟ್ಟಿಯೇ ಇಲ್ಲ ಎಂದು ಪತಿ ನಡುರಸ್ತೆಯಲ್ಲೇ ಪತ್ನಿಯ ಮುಂದೆ ರಂಪಾಟ ಮಾಡಿದ್ದಾನೆ. ಇದರಿಂದ ಸಿಟ್ಟುಗೊಂಡ ಪತ್ನಿ ಅಲ್ಲೇ ಇದ್ದ ಕಲ್ಲು ತೆಗೆದುಕೊಂಡು ಪತಿಯ ತಲೆಗೆ ಚಚ್ಚಿದ್ದಾರೆ. ಅಲ್ಲದೇ ತನ್ನ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿದ ಪತಿ ಕಾಲರ್ ಹಿಡಿದು ಎಳೆದಾಡಿದ್ದಾರೆ.
Advertisement
ಮಗುವಿನ ಬಗ್ಗೆ ಡೌಟ್ ಇದ್ದರೆ ಬಾ ಆಣೆ ಮಾಡ್ತೀನಿ ಎಂದು ಪತ್ನಿ ನಡುರಸ್ತೆಯಲ್ಲೇ ತನ್ನ ಪತಿಯನ್ನು ಎಳೆದಾಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಜನ ಜಮಾಯಿಸಿದ್ದು ವಿಡಿಯೋ ಈಗ ವೈರಲ್ ಆಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews