ಮೈಸೂರು: ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನು 2 ತಿಂಗಳಿನಿಂದ ಗೃಹಬಂಧನದಲ್ಲಿಟ್ಟು ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆಯ ಚಿಕ್ಕೊರು ಗ್ರಾಮದಲ್ಲಿ ನಡೆದಿದೆ.
ಸುಧಾರಾಣಿ ಎಂಬವರೇ ಎರಡು ತಿಂಗಳಿನಿಂದ ಗೃಹ ಬಂಧನದಲ್ಲಿದ್ದ ಮಹಿಳೆ. ಪತಿ ನಾಗೇಂದ್ರ ಪ್ರಸಾದ್ ಪತ್ನಿಯನ್ನು ಮನೆಯಲ್ಲಿ ಬಂಧಿಯಾಗಿ ಮಾಡಿದ್ದನು. ನಾಗೇಶ್ ಪ್ರಸಾದ್ 16 ವರ್ಷಗಳ ಹಿಂದೆ ಸುಧಾರಾಣಿ ಅವರನ್ನು ಮದುವೆಯಾಗಿದ್ದ. ಎರಡು ತಿಂಗಳಿನಿಂದ ಪತ್ನಿಯನ್ನ ಬಂಧನದಲ್ಲಿರಿಸಿ ದೈಹಿಕವಾಗಿ ಹಲ್ಲೆ ಮಾಡಿ ಕ್ರೌರ್ಯ ಮೆರೆದಿದ್ದಾನೆ.
Advertisement
ವಿಷಯ ತಿಳಿದ ಸಾಂತ್ವನ ಕೇಂದ್ರದ ಜಶೀಲ ಎಂಬುವರು ಚಿಕ್ಕೂರು ಗ್ರಾಮಕ್ಕೆ ಭೇಟಿ ನೀಡಿ ನಾಗೇಶ್ ಪ್ರಸಾದ್ ಕುಟುಂಬಸ್ಥರೊಂದಿಗೆ ವಾಗ್ವಾದ ನಡೆಸಿ ಸುಧಾರಾಣಿಯನ್ನ ರಕ್ಷಿಸಿದ್ದಾರೆ. ಈ ವೇಳೆ ಜಶೀಲ ಸಾಂತ್ವಾನ ಕೇಂದ್ರಕ್ಕೆ ನಾಗೇಶ್ ಪ್ರಸಾದ್ ಹಾಗೂ ಸಂಬಂಧಿಗಳು ಬೆದರಿಕೆ ಹಾಕಿದ್ದಾರೆ.
Advertisement
ಸುಧಾರಾಣಿ ಅವರು ಪತಿಯ ವಿರುದ್ಧ ಸರಗೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ಜಶೀಲ ಸಹ ರಕ್ಷಣೆ ಕೋರಿ ಬೀಚನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Advertisement