ತರಕಾರಿ ತರಲು 30ರೂ. ಕೇಳಿದ್ದಕ್ಕೆ ಪತ್ನಿಗೆ ತಲಾಖ್ ಕೊಟ್ಟ

Public TV
1 Min Read
muslim

ನೊಯ್ಡಾ: ತರಕಾರಿ ತರಲು 30 ರೂ. ಕೊಡಿ ಎಂದು ಪತ್ನಿ ಕೇಳಿದ್ದಕ್ಕೆ ಆಕೆಗೆ ಪತಿ ತಲಾಖ್ ಕೊಟ್ಟ ವಿಚಿತ್ರ ಘಟನೆಯೊಂದು ಶನಿವಾರ ನಡೆದಿದೆ.

ಈ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿರುವ ರಾವೋಜಿ ಮಾರ್ಕೆಟ್ ನಲ್ಲಿ ಶನಿವಾರ ನಡೆದಿದೆ. 32 ವರ್ಷದ ಶಬೀರ್ ತನ್ನ ಪತ್ನಿಗೆ ತಲಾಖ್ ಕೊಟ್ಟ ಪತಿ. ಈತ ತಲಾಖ್ ಮಾತ್ರವಲ್ಲದೇ ಪತ್ನಿಗೆ ಸ್ಕ್ರೂಡ್ರೈವರ್ ನಿಂದಲೂ ಹಲ್ಲೆ ನಡೆಸಿದ್ದಾನೆ.

money

ಮದುವೆಯಾದ ಬಳಿಕ ನನ್ನ ಮಗಳು ಆತನೊಂದಿಗೆ ಬಲವಂತದ ಜೀವನ ನಡೆಸುತ್ತಿದ್ದಾಳೆ. ಈ ಹಿಂದೆಯೂ ಶಬೀರ್ ನನ್ನ ಮಗಳ ತಲೆಗೆ ಕೋಲಿನಿಂದ ಥಳಿಸಿದ್ದನು. ಅಲ್ಲದೆ ಈ ಕೃತ್ಯದ ಹಿಂದೆ ಶಬೀರ್ ತಂದೆಯೂ ಭಾಗಿಯಾಗಿದ್ದು, ಮಗಳ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದನು ಎಂದು ಝೈನಾಬಿಯ ತಂದೆ ಮಾಧ್ಯಮದೊಂದಿಗೆ ಮಾತನಾಡುತ್ತಾ ದೂರಿದ್ದಾರೆ.

marriage divorce

ಶಬೀರ್ ಗೆ ನನ್ನ ಮಗಳು ಡಿವೋರ್ಸ್ ಕೊಡಬೇಕೆಂದು ಹಿಂದಿನಿಂದಲೂ ಇತ್ತು. ಆದರೂ ಆಕೆ ಅವನೊಂದಿಗೆ 5 ವರ್ಷದಿಂದ ಜೀವನ ಸಾಗಿಸುತ್ತಿದ್ದಳು. ಆದರೆ ಒಂದು ಶುಕ್ರವಾರ ದಾದ್ರಿಯಲ್ಲಿರುವ ತನ್ನ ಗಂಡನ ಮನೆಗೆ ತೆರಳಿದಾಗ ಶಬೀರ್ ತನಗೆ ಡಿವೋರ್ಸ್ ಕೊಡುವಂತೆ ಹೇಳಿದ್ದನು ಎಂದು ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ಮಹಿಳೆಯ ತಂದೆ ಕಣ್ಣೀರು ಹಾಕಿದ್ದಾರೆ.

final divorce decree

ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ದಾದ್ರಿ ಪೊಲೀಸ್ ಠಾಣೆಯಲ್ಲಿ ಶಬೀರ್ ಹಾಗೂ ಆತನ ಮನೆಯವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಅಲ್ಲದೆ ಪ್ರಕರಣವನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಹಸ್ತಾಂತರಿಸುವುದಾಗಿ ಪೊಲೀಸ್ ಅಧಿಕಾರಿ ನೀರಜ್ ಮಲಿಕ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *