ಕಾರವಾರ: ಕುಡಿತ ಮತ್ತಿನಲ್ಲಿ ಮತೊ ಮಹಾಶಯನೊಬ್ಬ ತನ್ನ ಪತ್ನಿ ಹಾಗೂ ಮಗನನ್ನು ಕೊಂದು ಬಳಿಕ ತಾನೂ ನೇಣಿಗೆ ಶರಣಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಂಗಣೆ ಗ್ರಾಮದಲ್ಲಿ ನಡೆದಿದೆ.
ತಾಕಿ ಮರಾಠಿ(35) ಹಾಗೂ ಲಕ್ಷ್ಮಣ ಮರಾಠಿ(12) ಕೊಲೆಯಾದವರು. ರಾಮ ಮರಾಠಿ(40) ಹೆಂಡತಿ, ಮಗನನ್ನ ಕೊಲೆ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇದನ್ನೂ ಓದಿ: `ಪವಿತ್ರ’ಪ್ರೇಮ ವಿಫಲ – ಯುವಕ ಕೈಕೊಟ್ಟನೆಂದು ಕಾಲೇಜಿನಲ್ಲೇ ವಿದ್ಯಾರ್ಥಿನಿ ನೇಣಿಗೆ ಶರಣು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ನಿನ್ನೆ ಕುಡಿದ ಮತ್ತಿನಲ್ಲಿ ಮನೆಗೆ ಬಂದಿದ್ದ ರಾಮ ಮರಾಠಿ, ಏಕಾಏಕಿ ಕತ್ತಿಯಿಂದ ಮಲಗಿದ್ದ ಪತ್ನಿಗೆ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ದೃಶ್ಯವನ್ನ ಇಬ್ಬರು ಮಕ್ಕಳು ನೋಡಿ ಕಿರುಚಾಡಿದ್ದಾರೆ. ಈ ವೇಳೆ ರಾಮ, ಒಬ್ಬ ಮಗನನ್ನ ಅಟ್ಟಿಸಿಕೊಂಡು ಹೋಗಿ ಕೊಂದಿದ್ದಾನೆ.
ಇತ್ತ ಇನ್ನೊಬ್ಬ ಮಗ ತಂದೆ ಕೈಯಿಂದ ತಪ್ಪಿಸಿಕೊಂಡಿದ್ದಾನೆ. ನಂತರ ಮನೆಗೆ ಬಂದ ರಾಮು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಕುಮಟಾ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸಿನಿಮಾ ಸ್ಟೈಲ್‍ನಲ್ಲಿ ಚೇಸಿಂಗ್ – ರಾಜಸ್ಥಾನಕ್ಕೆ ತೆರಳಿ ದರೋಡೆಕೋರರ ಹೆಡೆಮುರಿಕಟ್ಟಿದ ಬೆಂಗ್ಳೂರು ಪೊಲೀಸರು