ಬೆಳಗಾವಿ: ನಡು ರಸ್ತೆಯಲ್ಲಿಯೇ ಇಬ್ಬರು ಮಹಿಳೆಯರು ಹೊಡೆದಾಡಿಕೊಂಡ ಘಟನೆ ಬೆಳಗಾವಿ (Belagavi) ನಗರದ ಕೊಲ್ಹಾಪುರ ಸರ್ಕಲ್‌ನಲ್ಲಿ ನಡೆದಿದೆ.
ಮಾರಿಹಾಳ ಗ್ರಾಂಪಂ ಸದಸ್ಯೆಯ ಪತಿ ಬಸವರಾಜ್ ಸೀತಿಮನಿ ಅದೇ ಗ್ರಾಮದ ಮಾಸಾಬಿ ಸೈಯ್ಯದ್ ಜೊತೆ ಓಡಿಹೋಗಿದ್ದ. ಪತಿ ಓಡಿ ಹೋದ ಬಳಿಕ ಪತ್ನಿ ವಾಣಿಶ್ರೀ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ನ್ಯಾಯ ನೀಡುವಂತೆ ಮನವಿ ಮಾಡಿದ್ದಳು. ಇದನ್ನೂ ಓದಿ: ಮೈಸೂರಿನ ಉದಯಗಿರಿ ಗಲಾಟೆ – ಕಲ್ಲು ತೂರಿದ 1,000 ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ಎಫ್‌ಐಆರ್
Advertisement
Advertisement
ಎರಡು ತಿಂಗಳ ನಂತರ ಬೆಳಗಾವಿಗೆ ಬಂದು ಮಾಸಾಬಿ ಜೊತೆಗೆ ಬಸವರಾಜ್ ವಾಸ ಮಾಡತೊಡಗಿದ್ದ. ಬುಧವಾರ ರಾತ್ರಿ ವಾಣಿಶ್ರೀ ಕೈಯಲ್ಲಿ ಜೋಡಿಗಳು ಸಿಕ್ಕಿಬಿದ್ದಿದ್ದಾರೆ.
Advertisement
ಮಾಸಾಬಿಯನ್ನು ಪ್ರಶ್ನೆ ಮಾಡಿದ್ದಕ್ಕೆ ವಾಣಿಶ್ರೀ ಮೇಲೆ ಹಲ್ಲೆಯಾಗಿದೆ. ಹಲ್ಲೆಯಾಗುತ್ತಿದ್ದಂತೆ ಪರಸ್ಪರ ಜುಟ್ಟು ಹಿಡಿದುಕೊಂಡು ವಾಣಿಶ್ರೀ ಮತ್ತು ಮಾಸಾಬಿ ಇಬ್ಬರು ಹೊಡೆದಾಡಿಕೊಂಡಿದ್ದಾರೆ.
Advertisement
ಪತಿ ಬಸವರಾಜ್ ನಿಂದಲೂ ವಾಣಿಶ್ರೀಯ ಮೇಲೆ ಹಲ್ಲೆ ನಡೆದಿದೆ. ನಡು ರಸ್ತೆಯಲ್ಲಿ ಹೊಡೆದಾಡಿಕೊಳ್ಳುತ್ತಿರುವುದನ್ನು ನೋಡಿ ಸ್ಥಳೀಯರು ಮೂವರ ಜಗಳವನ್ನು ಬಿಡಿಸಿ ಕಳುಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಹೊಡೆದಾಡುವ ವಿಡಿಯೋ ಈಗ ಹರಿದಾಡುತ್ತಿದೆ.