ಟೆಕ್ಸಾಸ್: ಯುನೈಟೆಡ್ ಏರ್‌ಲೈನ್ಸ್ ನ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಎಲ್ಲರ ಮುಂದೆಯೇ ಸೆಕ್ಸ್ ಮಾಡಿ ಈಗ ಜೈಲಿನಲ್ಲಿ ಕಂಬಿ ಎನಿಸುತ್ತಿದ್ದಾರೆ.
ಪ್ರಯಾಣಿಕ ಎನ್‍ರಿಕ್ ಗೊನ್ಜಲೇಜ್(48) ಹಾಗೂ ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಲಾಸ್ ಎಂಜಲೀಸ್ ಹಾಗೂ ಸಾನ್ ಆಂಟೊನಿಯೋ ಮಾರ್ಗ ಮಧ್ಯೆ ದಂಪತಿ ಪ್ರಯಾಣಿಕರಿಂದ ತುಂಬಿದ್ದ ವಿಮಾನದಲ್ಲಿ ಈ ಕೃತ್ಯವೆಸೆಗಿದ್ದಾರೆ. ಇದನ್ನು ಕಂಡ ವಿಮಾನ ಸಿಬ್ಬಂದಿ ವಿಮಾನ ಸನ್ ಆಂಟೊನಿಯೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ ಮೇಲೆ ಅಲ್ಲಿನ ಪೊಲೀಸರಿಗೆ ಆರೋಪಗಳನ್ನು ಒಪ್ಪಿಸಿದ್ದಾರೆ.
Advertisement
Advertisement
ವಿಮಾನದಲ್ಲಿ ಲೈಟ್ಸ್ ಡಿಮ್ ಮಾಡಲಾಗಿತ್ತು. ಈ ವೇಳೆ ದಂಪತಿ ಸೆಕ್ಸ್ ಮಾಡಿದ್ದಲ್ಲದೆ, ಅಕ್ಕಪಕ್ಕದ ಜನ ನೋಡುತ್ತಿದ್ದರು ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ. ಅಲ್ಲದೆ ಆರೋಪಿ ಪಕ್ಕದಲ್ಲಿ ಕುಳಿತಿದ್ದ ಮಹಿಳೆ ಜೊತೆ ಕೂಡ ಅಸಭ್ಯವಾಗಿ ವರ್ತಿಸಿದ್ದ ಎಂದು ಪ್ರಯಾಣಿಕರೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ.
Advertisement
ಈ ಆರೋಪಗಳ ಆಧಾರದ ಮೇಲೆ ಪತಿಯನ್ನು ಬಂಧಿಸಿದ್ದರು. ಶುಕ್ರವಾರದಂದು ಆರೋಪಿಗೆ 400 ಯುಎಸ್ ಟಾಲರ್(ಸರಿಸುಮಾರು 35 ಸಾವಿರ ರೂ.) ದಂಡ ವಿಧಿಸಿ, 90 ದಿನಗಳ ಕಾಲ ಜೈಲು ಶಿಕ್ಷೆಯನ್ನು ಕೋರ್ಟ್ ವಿಧಿಸಿದ್ದು, ಆರೋಪಿ ಟೆಕ್ಸಾಸ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಮಹಿಳೆಯನ್ನು ಸಹ ಪೊಲೀಸರು ಬಂಧಿಸಿದ್ದು, ಆಕೆಯ ಕುರಿತ ಹೆಚ್ಚಿನ ಮಾಹಿತಿಗಳು ವರದಿಯಾಗಿಲ್ಲ.
Advertisement
ಈ ಬಗ್ಗೆ ಏರ್‌ಲೈನ್ಸ್ ನ ವಕ್ತಾರರು ಮಾತನಾಡಿ, ನಮಗೆ ಪ್ರಯಾಣಿಕರ ಸುರಕ್ಷತೆ ಮುಖ್ಯ. ಹೀಗಾಗಿ ಇನ್ನು ಮುಂದೆ ಆರೋಪಿ ಗೊನ್ಜಲೇಜ್ ಯುನೈಟೆಡ್ ಏರ್‌ಲೈನ್ಸ್ ನ ವಿಮಾನಗಳಲ್ಲಿ ಪ್ರಯಾಣಿಸುವಂತಿಲ್ಲ. ಆರೋಪಿಗೆ ನಮ್ಮ ವಿಮಾನಗಳಲ್ಲಿ ಪ್ರಯಾಣಿಸದಂತೆ ನಿಷೇಧ ಹೇರಿದ್ದೇವೆ ಎಂದಿದ್ದಾರೆ.