– ಕೆಎಲ್‍ಇ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಸೈನಿಕ
ಬೆಳಗಾವಿ: ಹಾಸಿಗೆಯಲ್ಲಿ ಹಾಯಾಗಿ ಮಲಗಿದ್ದ ಪತಿಗೆ ಬೆಂಕಿ ಹಚ್ಚಿ ಪತ್ನಿಯೇ ಕೊಲ್ಲಲೆತ್ನಿಸಿದ ಭೀಕರ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ನಗರದ ಲಕ್ಷ್ಮೀ ಟೆಕಡಿಯ ಸೈನಿಕ್ ನಗರದ ನಿವಾಸಿ ಸೈನಿಕ ದೀಪಕ್ ಪವಾರ್ ಅವರನ್ನು ಪತ್ನಿಯೇ ಹತ್ಯೆ ಮಾಡಲು ಯತ್ನಿಸಿದ್ದಾಳೆ. ಘಟನೆಯಲ್ಲಿ ದೀಪಕ್ ಕುಮಾರ್‍ಗೆ ಶೇಕಡಾ 85ರಷ್ಟು ಸುಟ್ಟ ಗಾಯಗಳಾಗಿದ್ದು, ಕೆಎಲ್‍ಇ ಆಸ್ಪತ್ರೆಯಲ್ಲಿ ತುರ್ತು ನಿಘಾ ಘಟಕದಲ್ಲಿ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾರೆ.
ಮಿಲಿಟರಿಯಲ್ಲಿರುವ ದೀಪಕ್ 9 ವರ್ಷದ ಹಿಂದೆ ಸವಿತಾ ಎಂಬಾಕೆಯನ್ನು ಮದುವೆಯಾಗಿದ್ದರು. ಆದ್ರೆ ಇತ್ತೀಚಿನ ನಡವಳಿಕೆಗಳ ಕಾರಣ ಪತ್ನಿಯ ಶೀಲ ಶಂಕಿಸಿ ಜಗಳವಾಡುತ್ತಿದ್ದರು. ಕಳೆದ ರಾತ್ರಿ ಸುಮಾರು ಒಂದು ಗಂಟೆಗೆ ಮಲಗಿದ್ದ ಹಾಸಿಗೆಗೆ ಬೆಂಕಿ ಬಿದ್ದಿತ್ತು. ನನ್ನ ಪತ್ನಿಯೇ ಈ ಕೃತ್ಯ ಎಸಗಿದ್ದಾಳೆ ಎಂದು ದೀಪಕ್ ಕ್ಯಾಂಪ್ ಠಾಣೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸ್ತಿದ್ದಾರೆ.