‘ಬಿಗ್ ಬಾಸ್’ (Bigg Boss) ಖ್ಯಾತಿಯ ವಿನಯ್ ಗೌಡ (Vinay Gowda) ಅವರು ಮಾರ್ಚ್ 8ರಂದು ಅದ್ಧೂರಿಯಾಗಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ. ಪತಿ ಬರ್ತ್‌ಡೇಗೆ ಅಕ್ಷತಾ ಗೌಡ ಬಿಗ್ ಸರ್ಪ್ರೈಸ್‌ವೊಂದನ್ನು ಕೊಟ್ಟಿದ್ದಾರೆ. ಅಕ್ಷತಾ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ನಾಳೆ ಕಿರುತೆರೆಯಲ್ಲಿ ಪ್ರಥಮ ಬಾರಿಗೆ ಸಪ್ತ ಸಾಗರದಾಚೆ ಎಲ್ಲೋ
‘ಹರಹರ ಮಹಾದೇವ’ ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ್ದ ವಿನಯ್ ಗೌಡ ಈಗ ಬಿಗ್ ಬಾಸ್ ಮನೆಗೆ ಆನೆ ಎಂದೇ ಫೇಮಸ್ ಆಗಿದ್ದಾರೆ. ಅದರಲ್ಲೂ ಶೋ ಮುಗಿದ ಮೇಲೆ ಈ ವರ್ಷ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ಜನ್ಮದಿನದಂದು ಪತಿ ವಿನಯ್‌ಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ತಮ್ಮ ಬೆನ್ನಿನ ಮೇಲೆ ಬೃಹತ್ ಟ್ಯಾಟೂವೊಂದನ್ನು ಅಕ್ಷತಾ ಹಾಕಿಸಿಕೊಂಡಿದ್ದಾರೆ. ಶಿವನ ಅವತಾರದಲ್ಲಿರುವ ವಿನಯ್ ಚಿತ್ರವನ್ನು ಪತಿಯ ಬರ್ತ್‌ಡೇ ಪ್ರಯುಕ್ತವಾಗಿ ಅಕ್ಷತಾ ಬೆನ್ನಿನ ಮೇಲೆ ಹಾಕಿಸಿಕೊಂಡಿದ್ದಾರೆ. ಪತಿ ಮೇಲಿನ ಅಕ್ಷತಾ ಪ್ರೀತಿಗೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.
ಅದಷ್ಟೇ ಅಲ್ಲ, ವಿನಯ್ ಕೂಡ ತಮ್ಮ ಕೈ ಮೇಲೆ ಆನೆ ಫೋಟೋವನ್ನು ಹಾಕಿಸಿಕೊಂಡಿದ್ದಾರೆ. ಜನರು ಕರೆಯುವ ಹೆಸರನ್ನೇ ವಿನಯ್ ತಮ್ಮ ಕೈಗೆ ಟ್ಯಾಟೂ ಆಗಿ ಹಾಕಿಸಿ ಫ್ಯಾನ್ಸ್‌ಗೆ ಖುಷಿಪಡಿಸಿದ್ದಾರೆ. ಇದನ್ನೂ ಓದಿ:‘ಮ್ಯಾಕ್ಸ್’ ಬಗ್ಗೆ ಮತ್ತೊಂದು ಅಪ್ ಡೇಟ್ ನೀಡಿದ ಕಿಚ್ಚ ಸುದೀಪ್
ಇನ್ನೂ 45ನೇ ವರ್ಷಕ್ಕೆ ಕಾಲಿಟ್ಟಿರುವ ವಿನಯ್‌ಗೆ ಬರ್ತ್‌ಡೇ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.